ಸೂಪರ್​ ಮಾರ್ಕೆಟ್​ಗೆ ನುಗ್ಗಿದ ದೊಡ್ಡ ಆನೆ ಏನು ಮಾಡಿತು ಗೊತ್ತಾ? ಅಚ್ಚರಿಗೊಂಡ ಜನರು! Elephant

Elephant
Published on

Elephant : ಥೈಲ್ಯಾಂಡ್‌ನಲ್ಲಿ ಆಘಾತಕಾರಿ ಹಾಗೂ ಅಪರೂಪದ ಘಟನೆಯೊಂದು ನಡೆದಿದೆ. ಒಂದು ದೊಡ್ಡ ಆನೆ ಸೂಪರ್‌ ಮಾರ್ಕೆಟ್‌ಗೆ ಪ್ರವೇಶ ನೀಡಿ, ಆಹಾರವನ್ನು ತಿಂದು ಹೋಗಿದೆ. ಅದು ಕೂಡ ಒಂದೇ ಬಾರಿಗೆ 9 ಚೀಲಗಳ ಸಿಹಿ ಅನ್ನ, ಸ್ಯಾಂಡ್‌ವಿಚ್‌ಗಳು ಮತ್ತು ಬಾಳೆಹಣ್ಣುಗಳನ್ನು ಚಪ್ಪರಿಸಿದೆ. ಆನೆ ತುಂಬಾ ಹಸಿದಿತ್ತು. ಆಹಾರವನ್ನು ಹುಡುಕುತ್ತಾ ಹೋಗುವಾಗ ಒಂದು ಸೂಪರ್‌ ಮಾರ್ಕೆಟ್ ನೋಡಿತು. ಬಳಿಕ ಅಲ್ಲಿಗೆ ಹೋಗಿ ತನಗೆ ಬೇಕಾದನ್ನು ತಿಂದು ಹೋಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ, ಸೂಪರ್​ ಮಾರ್ಕೆಟ್​ನಲ್ಲಿ ಹಲವು ರೀತಿಯ ಆಹಾರ ಪದಾರ್ಥಗಳಿದ್ದರೂ ಗಜರಾಜ ತನಗೆ ಬೇಕಾದನ್ನು ಮಾತ್ರ ತಿಂದನು. ದಿನಸಿ ಅಂಗಡಿಯೊಳಗೆ ಪ್ರವೇಶಿಸಿ, ಅಲ್ಲಿ ಯಾವುದೇ ದುಷ್ಕೃತ್ಯ ಎಸಗಲಿಲ್ಲ. ಅದು ತುಂಬಾ ಶಾಂತವಾಗಿ ವರ್ತಿಸಿತು. ಅದು ತನ್ನದೇ ಆದ ಕೆಲಸವನ್ನು ನೋಡಿಕೊಂಡಿತು. ಆಹಾರವನ್ನು ತಿಂದ ನಂತರ, ಅದು ಅಲ್ಲಿಂದ ಮೌನವಾಗಿಯೇ ಹೊರಟುಹೋಯಿತು.

ಆದರೆ, ಒಂದು ದೊಡ್ಡ ಆನೆ, ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದಾಗ ಗ್ರಾಹಕರು ಮತ್ತು ಅಂಗಡಿ ಮಾಲೀಕರು ಆಘಾತಕ್ಕೊಳಗಾದರು. ಆನೆ ತಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಭಯಭೀತರಾಗಿದ್ದರು. ಆನೆಯನ್ನು ನೋಡಿದ ಕೆಲವರು ಜೀವ ಭಯದಿಂದ ಓಡಿಹೋದರು. ಆದರೆ, ಆನೆ ಯಾರಿಗೂ ಹಾನಿ ಮಾಡಲಿಲ್ಲ. ಅದು ತನ್ನ ಹಸಿವನ್ನು ನೀಗಿಸಿಕೊಂಡು ಅಲ್ಲಿಂದ ಮೌನವಾಗಿ ಹಿಂತಿರುಗಿತು.

ಅಂದಹಾಗೆ, ಆ ಆನೆಯನ್ನು ನಗರದ ಸಮೀಪದ ಖಾವೋ ಯಾಯ್ ರಾಷ್ಟ್ರೀಯ ಉದ್ಯಾನವನದ 'ಪ್ಲೈ ಬಿಯಾಂಗ್ ಲೆಕ್' ಆನೆ ಎಂದು ಗುರುತಿಸಲಾಯಿತು. ತುಂಬಾ ಹಸಿದಿದ್ದರಿಂದ ನಗರವನ್ನು ಪ್ರವೇಶಿಸಿದೆ ಎಂಬುದು ತಿಳಿಯಿತು. ಅದು ಮಾಲ್‌ಗೆ ಪ್ರವೇಶಿಸುತ್ತಿದ್ದಂತೆ, ಆನೆಯ ದೊಡ್ಡ ತಲೆ ಸೀಲಿಂಗ್‌ಗೆ ಡಿಕ್ಕಿ ಹೊಡೆದಿದೆ. ಅದು ನಡೆಯುವಾಗ ಪ್ರತಿಯೊಂದು ಶೆಲ್ಫ್ ಅನ್ನು ತನ್ನ ಸೊಂಡಿಲಿನಿಂದ ಪರಿಶೀಲಿಸುತ್ತಿತ್ತು. ಆದರೆ, ಹೆಚ್ಚು ನಷ್ಟ ಮಾಡಲಿಲ್ಲ.

ಆನೆ ಬಂದಿರುವ ವಿಚಾರ ತಿಳಿದ ಕೂಡಲೇ ಉದ್ಯಾನವನದ ಸಿಬ್ಬಂದಿ ತಕ್ಷಣ ಅಲ್ಲಿಗೆ ಬಂದರು. ಆನೆಯನ್ನು ಅಲ್ಲಿಂದ ಹೊರಗೆಳೆಯಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಗಜರಾಜ ಅಲ್ಲಿಂದ ಸ್ವಲ್ಪವೂ ಕದಲಲಿಲ್ಲ. ಹೊಟ್ಟೆ ತುಂಬ ಊಟ ಮಾಡುವವರೆಗೂ ಪಕ್ಕಕ್ಕೆ ಕದಲಲಿಲ್ಲ. ಬಹುಶಃ ಆನೆಗೆ ತುಂಬಾ ಹಸಿವಾಗಿತ್ತು. ಆ ದೊಡ್ಡ ಆನೆ ನಿಧಾನವಾಗಿ ಸೂಪರ್ ಮಾರ್ಕೆಟ್​ನಿಂದ ತಾನಾಗೇ ಹೊರಬಂದಿತು.

ಜೂನ್ 2ರಂದು ಪೋಸ್ಟ್ ಮಾಡಲಾದ ಈ ವಿಡಿಯೋವನ್ನು 2.7 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅನೇಕ ಜನರು ವಿಡಿಯೋ ಕೆಳಗೆ ಕಾಮೆಂಟ್ ಮಾಡಿದ್ದಾರೆ. ಈ ಆನೆ ಎಷ್ಟು ಶಾಂತವಾಗಿ ಆ ಕಾರಿಡಾರ್ ಮೂಲಕ ನಡೆಯುತ್ತಿದೆ. ಆನೆ ಒಂದೇ ಒಂದು ವಸ್ತುವನ್ನು ನಾಶಮಾಡದೆ ನಡೆಯುತ್ತಿದೆ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net