

ಹಾವೇರಿ: ನೌಕರರ ಕಷ್ಟ ಸುಖಗಳಿಗೆ ಸ್ಪಂದಿಸುವಂತೆ ಸಹಕಾರಿ ಸಂಘಗಳು ತಮ್ಮ ಲಾಭಾಂಶದ ಒಂದಿಷ್ಟು ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೂ ವಿನಿಯೋಗಿಸುವಂತಾಗಬೇಕು. ಯಾವುದೇ ಚುನಾವಣೆ ಮುಗಿದ ನಂತರ ಪ್ರಜಾಪ್ರಭುತ್ವದ ರೀತಿಯಲ್ಲಿ ಸೋಲು ಗೆಲುವಿನಾಚೆ ಸಹಕಾರಿ ಆಂದೋಲನದ ಏಳಿಗೆಗೆ ಕೈ ಜೋಡಿಸಬೇಕೆಂದು ಜಿಲ್ಲಾ ಸಹಕಾರ ಹಾಲು ಉತ್ಪಾಕದರ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.
ಇಲ್ಲಿಯ ಹೆಸ್ಕಾಂ ಆವರಣದಲ್ಲಿರುವ ವಿದ್ಯುತ್ ಪ್ರಸರಣ ನಿಗಮ ಮತ್ತು ಹುಬ್ಬಳ್ಳಿ ಸರಬರಾಜು ಕಂಪನಿ ಸಹಕಾರ ಸಂಘಸ 47ನೇ ಸರ್ವಸದಸ್ಯರ ಮಹಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕ.ವಿ.ಪ್ರ.ನಿ ನೌಕರರ ಸಂಘದ ನಿಕಟಪೂರ್ವ ಕಾರ್ಯಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಐದು ದಶಕಗಳಿಂದಲೂ ಕೆಲಸ ನಿರ್ವಹಿಸುತ್ತಿರುವ ನಮ್ಮ ಸಹಕಾರಿ ಪತ್ತು ಎಂದೂ ನಷ್ಟ ಅನುಭವಿಸಿಲ್ಲ. ಇಂತಹ ಸಂಸ್ಥೆ ಕಟ್ಟಿದ ಹಿರಿಯರನ್ನು ನಾವು ಸ್ಮರಿಸಬೇಕು. ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ ಎಂಬುದಕ್ಕೆ ರಸ್ತೆ ಅಪಘಾತದಲ್ಲಿ ಮಡಿದ ಹಾನಗಲ್ಲಿನ ಮ್ಯಾಕಾನಿಕ್ ನಾಗಪ್ಪ ಭಜಂತ್ರಿ ಅವರಿಗೆ ಎರಡೂವರೆ ಲಕ್ಷ ಧನ ಸಹಾಯ ಮಾಡಿದ್ದು ಮಾನವೀಯ ಕೆಲಸ ಎಂದರು.
ಸಂದ ಅಧ್ಯಕ್ಷ ಟಿ. ಸತೀಶ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಎಂ.ಎಸ್. ಕುಮ್ಮೂರ, ಎಚ್. ಮೊಹಮದ್ ಅಮಾನುಲ್ಲಾ. ಎ.ಕೆ. ಯಮನೂರ, ಸಿ.ಬಿ. ಹೊಸಮನಿ, ಶಿವಾನಂದ ಹಾದಿಮನಿ, ಎಚ್.ಎಸ್. ಬಸವರಾಜಯ್ಯ, ಎನ್.ಟಿ. ಹಾವೇರಿ, ಸಿ.ಎನ್. ಬಡ್ನಿ. ವಿ.ಎಸ್. ಮರಿಗೌಡ್ರ, ಎಂ.ಡಿ. ಕೊರವರ, ಎಂ.ಬಿ. ಸಣ್ಣಿಂಗಮ್ಮನವರ, ಕೆ.ಎನ್. ಅಗಡಿ, ಎಚ್.ಸಿ. ಮರಿದ್ಯಾಮಣ್ಣನವರ, ಹುಸೇನ್ಸಾಬ, ಪ್ರಭಾಕರ ಎಂ.ಎಸ್. ಮತ್ತಿತರರಿದ್ದರು.