

ರಾಣೆಬೆನ್ನೂರ: ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಪವಿಭಾಗ- 1 ಮತ್ತು 2ರ ಗ್ರಾಹಕರ ಸಂವಾದ ಸಭೆ ಅ. 18ರಂದು ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ನಗರದ ಹೆಸ್ಕಾಂ ಸಮುದಾಯ ಭವನದಲ್ಲಿ ಜರುಗಲಿದೆ.
ತಾಲೂಕಿನ ಹಲಗೇರಿ, ಇಟಗಿ, ತುಮ್ಮಿನಕಟ್ಟಿ, ಚಳಗೇರಿ, ಮೇಡ್ಲೇರಿ, ರಾಣೆಬೆನ್ನೂರ ನಗರ, ಹೊನ್ನತ್ತಿ ವ್ಯಾಪ್ತಿಯ ಗ್ರಾಹಕರು ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.