

ರಾಣೆಬೆನ್ನೂರ: ಇಲ್ಲಿಯ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕಾರ್ಯ ಮತ್ತು ಪಾಲನೆ ಉಪವಿಭಾಗ- 2&1ರ ವತಿಯಿಂದ ಜು. 19ರಂದು ನಗರದ ಹೆಸ್ಕಾಂ ಕಚೇರಿಯಲ್ಲಿ ಮಧ್ಯಾಹ್ನ 3ರಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ಸಭೆ ಜರುಗಲಿದೆ. ತಾಲೂಕಿನ ಹಲಗೇರಿ, ಇಟಗಿ, ತುಮ್ಮಿನಕಟ್ಟಿ, ಚಳಗೇರಿ, ಮೇಡ್ಲೇರಿ ಹಾಗೂ ನಗರದ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಸಮಸ್ಯೆ ತಿಳಿಸಬೇಕು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.