

ರಾಣೆಬೆನ್ನೂರ: ಇಲ್ಲಿಯ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಪವಿಭಾಗ-&1 ಮತ್ತು 2ರ ಗ್ರಾಹಕರ ಸಂವಾದ ಸಭೆ ಆ. 16ರಂದು ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೆ ನಗರದ ಸಮುದಾಯ ಭವನದಲ್ಲಿ ಜರುಗಲಿದೆ.
ತಾಲೂಕಿನ ಹಲಗೇರಿ, ಇಟಗಿ, ತುಮ್ಮಿನಕಟ್ಟಿ, ಚಳಗೇರಿ, ಮೇಡ್ಲೇರಿ, ರಾಣೆಬೆನ್ನೂರ ನಗರ ಶಾಖೆ 1, 2, ಹೊನ್ನತ್ತಿ ಹಾಗೂ ರಾಣೆಬೆನ್ನೂರ ಗ್ರಾಮೀಣ ಶಾಖಾ ವ್ಯಾಪ್ತಿಯ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.