

ಬೆಂಗಳೂರು: ಕನ್ನಡ ಸಿನಿಮಾ ಮೂಲಕವಾಗಿ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾದ ಈಕೆ ಇಂದು ಪರಭಾಷೆಯಲ್ಲೂ ಬೇಡಿಕೆಯ ನಟಿ ( Heroine ) ಆಗಿದ್ದಾರೆ. ಸ್ಟಾರ್ ಹೀರೋಯಿನ್ ಆಗಿರುವ ಈಕೆ ಸತತ ಸ್ಟಾರ್ ಹೀರೋ ಸಿನಿಮಾಗಳಲ್ಲಿ ಅವಕಾಶಗಳು ಬಂದವು. ಯಾರು ಈ ನಟಿ ಗೊತ್ತಾ? ನಾವು ಇಂದು ಈ ನಟಿ ಕುರಿತಾಗಿ ನಿಮಗೆ ಪರಿಚಯ ಮಾಡಲಿದ್ದೇವೆ.
ರಶ್ಮಿಕಾ ಮಂದಣ್ಣ ಬಗ್ಗೆ ಕನ್ನಡಿಗರಿಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ರಶ್ಮಿಕಾ ಮೂಲವೇ ಕರ್ನಾಟಕ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ, ವೃತ್ತಿ ಜೀವನದಲ್ಲಿ ಯಶಸ್ವಿ ನಾಯಕಿಯಾಗಿ ಮುಂದುವರೆದಿದ್ದಾರೆ.
ರಶ್ಮಿಕಾ ಅವರು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಒಂದು ಕೊಡವ ಕುಟುಂಬದಲ್ಲಿ ಜನಿಸಿದರು. ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಿಕ ವಿಧ್ಯಾಬ್ಯಾಸವನ್ನು ಪಡೆದರು, ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ & ಕಾಮರ್ಸ್ನಿಂದ ಸೈಕಾಲಜಿ, ಜರ್ನಲಿಸಮ್ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ರಶ್ಮಿಕಾ ಅವರು ೨೦೧೪ ರಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಅದೇ ವರ್ಷ ಅವರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು ಹಾಗು ಕ್ಲೀನ್ ಅಂಡ್ ಕ್ಲಿಯರ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ನಂತರ ಅವರು ಲಾಮೋಡ್ ಬೆಂಗಳೂರಿನ ಅತ್ಯತ್ತಮ ರೂಪದರ್ಶಿ ಹುಡುಕಾಟ ೨೦೧೫ ರಲ್ಲಿ ಟಿ.ವಿ.ಸಿ ಯ ಪ್ರಶಸ್ತಿಯನ್ನು ಪಡೆದರು.
ಈ ಸ್ಪರ್ಧೆಯಲ್ಲಿ ಅವರ ಚಿತ್ರಗಳು ಕಿರಿಕ್ ಪಾರ್ಟಿ ಚಲನಚಿತ್ರದ ತಯಾರಕರನ್ನು ಆಕರ್ಷಿಸಿತು, ನಂತರ ಆಕೆಯು ೨೦೧೬ ರ ಆರಂಭದಲ್ಲಿ ನಾಯಕಿ ನಟಿಯಾಗಿ ನಟಿಸಿದರು. ಕಿರಿಕ್ ಪಾರ್ಟಿ ( Kirik Party ) ಚಲನಚಿತ್ರದಲ್ಲಿ ಕರ್ಣ(ರಕ್ಷಿತ್ ಶೆಟ್ಟಿ)ನ ಕಾಲೇಜು ಪ್ರೇಯಸಿ ಸಾನ್ವಿ ಜೋಸೆಫ್ ಪಾತ್ರದಲ್ಲಿ ನಟಿಸಿದರು.
ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆಗೆ ಪಾತ್ರವಾಯಿತು. ಜೊತೆಗೆ, ರಶ್ಮಿಕಾ ಅಭಿನಯವು ಮೆಚ್ಚುಗೆಯನ್ನು ಪಡೆಯಿತು ಹಾಗು ೨೦೧೬ ರ ಅತ್ಯುತ್ತಮ ನಟಿ (ಚೊಚ್ಚಲ) ಯಾಗಿ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರಶಸ್ತಿಯನ್ನು ಗೆದ್ದುಕೊಂಡರು. ನಂತರ ಕನ್ನಡ. ತಲಗು, ತಮಿಳು. ಹಿಂದಿ ಹೀಗೆ ಹಲವು ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಹಲವು ಅದ್ಭುತ ಚಿತ್ರಗಳನ್ನು ಮಾಡಿರುವ ಸೌತ್ ಬ್ಯೂಟಿ, ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಾಯಕಿಯಾದರು. ಈಗ ಪುಷ್ಪ-2 ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.