ಐಶ್ವರ್ಯಾ ರೈಗೆ ಟಕ್ಕರ್​​ ಕೊಟ್ಟಿದ್ದ ಖ್ಯಾತ ನಟಿ ಈಗ ಸನ್ಯಾಸಿ; ನಟನೆಗೆ ಗುಡ್ ಬೈ ಹೇಳಿ ಹೆಸರನ್ನು ಬದಲಾಯಿಸಿಕೊಂಡಳು

Barkha Madan
Published on

ನವದೆಹಲಿ: ಹೆಸರು, ಕೀರ್ತಿ, ಹಣ ಅಥವಾ ಮನ್ನಣೆ ಎರಡೂ ಕೂಡ ಕೆಲವೊಮ್ಮೆ ತೃಪ್ತಿಪಡಿಲ್ಲ. ಇನ್ನೆನನ್ನೋ ಹುಡುಕಿಕೊಂಡು ಹೋಗಿರುವ ಕೆಲವು ಉದಾಹರಣಗಳು ನಮ್ಮ ಮುಂದೆ ಇವೆ. ಹೀಗೆ ಇಲ್ಲೊಬ್ಬರು ನಟಿ ಚಿತ್ರರಂಗವನ್ನು ಬಿಟ್ಟು ಬೌದ್ಧ ಧರ್ಮವನ್ನು ಸ್ವೀಕರಿಸಿ ಸನ್ಯಾಸಿನಿಯಾದಳು. ನಟಿ ಯಾರು ಎಂದು ನಿಮ್ಮ ಪ್ರಶ್ನೆ ಹುಟ್ಟಿರಬಹುದು. ಈ ಸುದ್ದಿಯಲ್ಲಿದೆ ಸಂಪೂರ್ಣವಾದ ಮಾಹಿತಿ...

ಬರ್ಖಾ ಮದನ್.. ಒಂದು ಕಾಲದಲ್ಲಿ ಫೇಮಸ್ ಮಾಡೆಲ್. 1994 ರಲ್ಲಿ ಮಿಸ್ ಇಂಡಿಯಾ ಫೈನಲಿಸ್ಟ್. ಸೌಂದರ್ಯ ಕಿರೀಟಕ್ಕಾಗಿ ಸುಶ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಅವರೊಂದಿಗೆ ಸ್ಪರ್ಧಿಸಿ ಮೊದಲ ರನ್ನರ್ ಅಪ್ ಆದರು.
Barkha Madan
ಬರ್ಖಾ ಮದನ್ ಮಿಸ್ ಟೂರಿಸಂ ವರ್ಲ್ಡ್ ವೈಡ್ ರನ್ನರ್ ಅಪ್ ಆದರು. 1996ರಲ್ಲಿ ‘ಖಿಲಾಡಿ ಕಾ ಕಿಲಾಡಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 2003 ರಲ್ಲಿ, ರಾಮ್ ಗೋಪಾಲ್ ವರ್ಮಾ 'ಭೂತ' ಚಿತ್ರದಲ್ಲಿ ಕಾಣಿಸಿಕೊಂಡರು. ದೆವ್ವದ ಪಾತ್ರದಲ್ಲಿ ಹೆದರಿಸಿದ್ದು ಮಾತ್ರವಲ್ಲದೆ ಒಳ್ಳೆಯ ಹೆಸರು ಕೂಡ ಗಳಿಸಿದ್ದಾರೆ. ಒಂದೆಡೆ ಸಿನಿಮಾ ಮಾಡುತ್ತಿದ್ದು, ಇನ್ನೊಂದೆಡೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಬರ್ಖಾ ಇದ್ದಕ್ಕಿದ್ದಂತೆ ಸನ್ಯಾಸಿನಿಯಾಗಿ ಬದಲಾದರು.
ಬರ್ಖಾ ಮದನ್ ಹೆಸರು ಈಗ 'ಗಾಲ್ಟೆನ್ ಸ್ಯಾಮ್ಟೆನ್'. ಅವರು ಪರ್ವತಗಳು ಮತ್ತು ಆಶ್ರಮಗಳಲ್ಲಿ ತಿರುಗಾಡುವುದನ್ನು ಕಾಣಬಹುದು. ಬರ್ಖಾ ಮದನ್ ಅವರು ತಮ್ಮ ಆಧ್ಯಾತ್ಮಿಕ ವಿಷಯಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ದಲೈ ಲಾಮಾ ಅವರ ಅನುಯಾಯಿಯಾಗಿರುವ ಬರ್ಖಾ ಅವರು 2012 ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಲು ಬಯಸಿದ್ದರು.
ಪ್ರಸ್ತುತ ಇವರ ಜೀವನವು ಧ್ಯಾನ, ಪ್ರಾರ್ಥನೆ ಮತ್ತು ಜನರ ಸೇವೆಯಿಂದ ತುಂಬಿದೆ. ರೂಪದರ್ಶಿ, ನಟಿ, ನಿರ್ಮಾಪಕಿಯೂ ಆಗಿರುವ ಬರ್ಖಾ ಅವರು ಸನ್ಯಾಸಿನಿಯಾಗಲು ಬಲವಾದ ಕಾರಣಗಳು ಇದ್ದಿರಬಹುದು ಎನ್ನಲಾಗಿದೆ. ಸನ್ಯಾಸಿಯಾದರು ಮತ್ತು ತಮ್ಮ ಹೆಸರನ್ನು ಗ್ಯಾಲ್ಟೆನ್ ಸ್ಯಾಮ್ಟೆನ್ ಎಂದು ಬದಲಾಯಿಸಿಕೊಂಡರು. ಇಂದು, ಅವರು ಪರ್ವತಗಳಲ್ಲಿನ ಮಠಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಆಧ್ಯಾತ್ಮಿಕ ಜೀವನದ ಫೋಟೋಗಳನ್ನು ತಮ್ಮ Instagram ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net