ಕಾರಿನ ಡೆಂಟ್ ತೆಗೆಯಲು ಇಲ್ಲಿದೆ ಸುಲಭೋಪಾಯ...!

Car dent
Published on

ಬೆಂಗಳೂರು: ಕಾರು ಓಡಿಸುವಾಗ ಎಷ್ಟೇ ಜಾಗರೂಕರಾಗಿದ್ದರೂ ಒಮ್ಮೊಮ್ಮೆ ಅಪಘಾತ ಸಂಭವಿಸುತ್ತದೆ. ಇದರಿಂದ ಮನಸ್ಸಿಗೆ ಆಘಾತವಾಗುವುದರೊಂದಿಗೆ ಸಣ್ಣಪುಟ್ಟ ರಿಪೇರಿಗಳಿಗಾಗಿ ಜೇಬಿಗೆ ಕತ್ತರಿ ಬೀಳುತ್ತೆ. ಅಕಸ್ಮಾತ್ ಕಾರಿನ ಮೈಮೇಲೆ ಡೆಂಟ್ ಬಿದ್ದರೆ ಅದನ್ನು ಸರಿಮಾಡಲು ಗ್ಯಾರೇಜಿನಲ್ಲಿ ದೊಡ್ಡ ಬಿಲ್ಲನ್ನೇ ನೀಡುತ್ತಾರೆ. ಡೆಂಟ್ ತೆಗೆಯುವುದರ ಜೊತೆಗೆ ಮತ್ತೆರಡು ಸಮಸ್ಯೆ ಹೇಳಿ ಹೆಚ್ಚು ದುಡ್ಡು ಪೀಕುವುದೂ ಉಂಟು.

ಹೀಗಿರುವಾಗ ಕಾರಿನ ಡೆಂಟ್ ನೀವೇ ಒಂದು ನಯಾ ಪೈಸೆ ಖರ್ಚಿಲ್ಲದೆ ತೆಗೆಯುವ ಸರಳ ಮಾರ್ಗವಿದೆ ಎಂದರೆ ನಂಬುವಿರಾ? ಹೌದು, ಇದು ಸಾಧ್ಯ! ಇದಕ್ಕಾಗಿ ನಿಮಗೆ ಬೇಕಾದ್ದು ಕೇವಲ ಎರಡೇ ವಸ್ತುಗಳು - ಕುದಿಯುವ ನೀರು ಮತ್ತು ಒಂದು ಟಾಯ್ಲೆಟ್ ಪ್ಲಂಜರ್.

ವಿಧಾನ: ಕೆಟಲ್​ ಅಥವಾ ಪಾತ್ರೆಯಲ್ಲಿ ನೀರು ತುಂಬಿ ಕುದಿಸಿರಿ. ನೀರು ಕುದಿಯಲು ಆರಂಭವಾದೊಡನೆ ಆ ನೀರನ್ನು ಕಾರಿನ ಮೇಲಿರುವ ಡೆಂಟ್ ಮತ್ತು ಅದರ ಸುತ್ತಮುತ್ತಲ ಜಾಗದ ಮೇಲೆ ಹಾಕಿ. ನಂತರ ಟಾಯ್ಲೆಟ್​ ಪ್ಲಂಜರನ್ನು ಆ ಭಾಗದ ಮೇಲೆ ಒತ್ತಿ ನಿಮ್ಮೆಡೆಗೆ ಎಳೆದುಕೊಳ್ಳಿ. ಕಡಿಮೆ ಅಗಲದ ಡೆಂಟ್ ಆದರೆ ತಕ್ಷಣ ಸರಿಹೋಗುತ್ತದೆ. ಇಲ್ಲವೆ ಇನ್ನೆರಡು ಬಾರಿ ಒತ್ತಿ ತೆಗೆಯಿರಿ. ಡೆಂಟ್ ಕ್ರಮೇಣ ಮಾಯವಾಗುತ್ತೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net