

ಕರೊನಾ ಸೋಂಕು ದಿನೇದಿನೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು, ಬಾಲಿವುಡ್ನ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ಗೂ ಶನಿವಾರ ಕರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಅದರ ಬೆನ್ನಲ್ಲೆ ಅಭಿಷೇಕ್ ಬಚ್ಚನ್ ವರದಿ ಸಹ ಪಾಸಿಟಿವ್ ಬಂದಿತ್ತು. ಅನುಪಮ್ ಖೇರ್ ಕುಟುಂಬಕ್ಕೂ ಕರೊನಾ ಅಂಟಿದೆ. ಹೀಗಿರುವಾಗಲೇ ಹಿರಿಯ ನಟಿ ಹೇಮಾ ಮಾಲಿನಿಗೂ ಕರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಹೇಮಾಮಾಲಿನಿಗೂ ಕರೊನಾ ಎಂಬಿತ್ಯಾದಿ ಸುದ್ದಿ ಹರಿದಾಡಿದ್ದರ ಹಿನ್ನೆಲೆಯಲ್ಲಿ ಹೇಮಾಲಿನಿ ಪುತ್ರಿ ಇಶಾ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ. ನನ್ನ ತಾಯಿ ಹೇಮಾಮಾಲಿನಿ ಆರೋಗ್ಯವಾಗಿದ್ದಾರೆ. ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಹರಿದಾಡುತ್ತಿರುವ ಸುದ್ದಿ ಸುಳ್ಳು. ಅಂತ ವದಂತಿಗಳಿಗೆ ಸ್ಪಂದಿಸಬೇಡಿ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ಟ್ವಿಟರ್ ಮೂಲಕ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.
ಇನ್ನು ಸ್ವತಃ ಹೇಮಾಮಾಲಿನಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡು, ಹರಿದಾಡುತ್ತಿರುವ ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಸದ್ಯ ಬಾಲಿವುಡ್ ಹಲವು ಘಟಾನುಘಟಿ ಸಿನಿಮಾ ತಾರೆಯರಿಗೆ ಕರೊನಾ ಪಾಸಿಟಿವ್ ವರದಿಯಾಗುತ್ತಿರುವ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಸುದ್ದಿಗಳ ಆರ್ಭಟವೂ ಜೋರಾಗಿದೆ. (ಏಜೆನ್ಸೀಸ್)