ಇದು ಸಾರ್ವಜನಿಕರಿಗೆ ಉಚಿತ ಟೆಲಿ ಮಾನಸಿಕ ಆರೋಗ್ಯ ಸೇವೆಗಳನ್ನು 24/7 ನೀಡುತ್ತಿದ್ದು, ಇದಕ್ಕಾಗಿಯೇ ಉಚಿತ ಟೋಲ್ ಫ್ರೀ ಸಹಾಯವಾಣಿ 14416 ಮತ್ತು 1800-891-4416 ಅನ್ನು ಸ್ಥಾಪಿಸಲಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಎರಡು ಟೆಲಿ ಮಾನಸ್ ಘಟಕಗಳನ್ನು ಸಹ ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್‍ಕುಮಾರ್ ತಿಳಿಸಿದ್ದಾರೆ.