ಉರ್ದು ಶಾಲೆ ರಸ್ತೆ ಕೆಸರುಮಯ

ANP-road
ಆನಂದಪುರ ಸಮೀಪ ಆಚಾಪುರದಲ್ಲಿ ಗದ್ದೆಯಂತಾಗಿರುವ ಸರ್ಕಾರಿ ಉರ್ದು ಶಾಲೆ ಪಕ್ಕದ ರಸ್ತೆ.
Published on

ಆನಂದಪುರ: ಸಮೀಪದ ಆಚಾಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಂಪರ್ಕ ರಸ್ತೆ ಕೆಸರುಮಯವಾಗಿದೆ. ಆಚಾಪುರ ಕೆರೆ ಪಕ್ಕದಲ್ಲೇ ಇರುವ ಈ ಶಾಲೆಗೆ ಎಡಭಾಗದಿಂದ ರಸ್ತೆಯಿದೆ. ಶಾಲೆ ಹಿಂಭಾಗದಲ್ಲಿ ಸುಮಾರು 20ಕ್ಕೂ ಅಧಿಕ ಕುಟುಂಬಗಳಿದ್ದು ವಿದ್ಯಾರ್ಥಿಗಳು ಈ ರಸ್ತೆ ಮೂಲಕ ಬರಬೇಕಾಗಿದೆ. ಕೆಸರುಮಯ ರಸ್ತೆಯಲ್ಲಿ ಶಾಲಾ ಬ್ಯಾಗ್ ಹೊತ್ತು ಬರುವ ವಿದ್ಯಾರ್ಥಿಗಳು ಜಾರಿ ಬಿದ್ದ ಅನೇಕ ಉದಾಹರಣೆಗಳಿವೆ. ಸುಮಾರು 300 ಮೀಟರ್ ಉದ್ದದ ಈ ಕೆಸರಿನ ರಸ್ತೆ ಡಾಂಬರೀಕರಣ ಮಾಡುವ ಅಗತ್ಯವಿದೆ. ಪಾಲಕರಿಗೆ ನಿತ್ಯವೂ ಮಕ್ಕಳನ್ನು ಶಾಲೆಗೆ ಸುರಕ್ಷತವಾಗಿ ಕಳುಹಿಸುವ ಮತ್ತು ಸಂಜೆ ಸಮಯದಲ್ಲಿ ಮನೆಗೆ ಕರೆ ತರುವುದು ದೊಡ್ಡ ಸವಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net