

ಇಂದು ಮತ್ತು ನಾಳೆ ರಾಜ್ಯದ ಬಹುತೇಕ ಕಡೆಗಳಲ್ಲಿ ಪೂರ್ವ ಮುಂಗಾರು ಅಬ್ಬರಿಸುವ ಸಾಧ್ಯತೆ ಇದೆ. ಪ್ರಬಲ ಗಾಳಿ, ಗುಡುಗು, ಮಿಂಚು ಕೂಡ ಇರುವ ಮುನ್ಸೂಚನೆ ಸಿಕ್ಕಿದೆ. ಎರಡು ದಿನದ ಬಳಿಕ ರಾಜ್ಯದಲ್ಲಿ ಮಳೆಯ ಕ್ರಮೇಣ ಕಡಿಮೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ
ದಕ್ಷಿಣ ಭಾರತದಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ಪಾಶ್ಚಿಮಾತ್ಯ ವಾಯುಭಾರ ಕುಸಿತವು ಮಾರ್ಚ್ 24 ರಿಂದ 28 ರವರೆಗೆ ಸಕ್ರಿಯವಾಗಿರುತ್ತದೆ. ಮಾರ್ಚ್ 28 ಮತ್ತು 29 ರಂದು ದೆಹಲಿ-ಎನ್‌ಸಿಆರ್‌ನಲ್ಲಿ ಪಾಶ್ಚಿಮಾತ್ಯ ಅವಾಂತರದ ಪರಿಣಾಮವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ನಂತರ ಇಲ್ಲಿ ಆಕಾಶವು ಮೋಡದಿಂದ ಕವಿದಿರುತ್ತದೆ. ಈ ಅವಧಿಯಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯು ಗಂಟೆಗೆ 20 ರಿಂದ 30 ಕಿಲೋಮೀಟರ್ ವೇಗದಲ್ಲಿ ಬೀಸಬಹುದು.
ಮತ್ತೊಂದೆಡೆ, ಜಾರ್ಖಂಡ್, ಪಶ್ಚಿಮ ಬಂಗಾಳ, ಈಶಾನ್ಯ ಭಾರತ ಮತ್ತು ಒಡಿಶಾ ಸೇರಿದಂತೆ ಅಂಡಮಾನ್ ಮತ್ತು ನಿಕೋಬಾರ್‌ಗೂ ಇದೇ ರೀತಿಯ ಮುನ್ಸೂಚನೆ ನೀಡಲಾಗಿದೆ. ಮುಂದಿನ 2-3 ದಿನಗಳವರೆಗೆ ಈಶಾನ್ಯ ಭಾರತದಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ.
ಇನ್ನು ನಿನ್ನೆಯ ದಿನ ತುಮಕೂರು, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಮಳೆಯಾಗಿದೆ. ಇಂದು ಮತ್ತು ನಾಳೆ ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬೆಳಗಾವಿ, ಧಾರವಾಡದಲ್ಲಿ ತುಂತುರು ಮಳೆಯನ್ನು ನಿರೀಕ್ಷೆ ಮಾಡಲಾಗಿದೆ.
ಹವಾಮಾನ ಇಲಾಖೆಯ ಸೂಚನೆ ಒಂದು ರೀತಿಯ ಗುಡ್ನ್ಯೂಸ್ ಇಂದೇ ಹೇಳಬಹುದು. ಯಾಕೆಂದರೆ ರಾಜ್ಯದಲ್ಲಿ ವಿಪರೀತ ಉರಿ ಬಿಸಿಲು ಶುರುವಾಗಿದೆ. ಸೆಕೆಯಿಂದ ಜನ ಕಂಗಾಲಾಗಿದ್ದಾರೆ. ಸಂಜೆ ವೇಳೆಗೆ ಜನರು ಮಳೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಮೊನ್ನೆಯ ದಿನ ಬೆಂಗಳೂರಲ್ಲಿ ಸಂಜೆ ವೇಳೆಗೆ ಭಾರೀ ಮಳೆ ಬಂದಿತ್ತು. ಅನಾಹುತಗಳ ಮಧ್ಯೆಯೂ ಒಂದಷ್ಟ ತಂಪೆರೆದಿತ್ತು. ಹೀಗಾಗಿ ಸಿಲಿಕಾನ್ ಸಿಟಿ ಜನರು ಖುಷ್ ಆಗಿದ್ದರು.