

ಚೆನ್ನೈ: ತಮಿಳುನಾಡಿನಲ್ಲಿ ಆ.13ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ರಾಜ್ಯದಲ್ಲೂ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಹವಾಮಾನ ಬದಲಾವಣೆಯಿಂದ ವಾಯುಭಾರ ಕುಸಿತ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನ್ನಾರ್ ಕೊಲ್ಲಿ, ದಕ್ಷಿಣ ತಮಿಳುನಾಡು ಕರಾವಳಿ ಪ್ರದೇಶಗಳು ಮತ್ತು ಕುಮಾರಿ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 35 ರಿಂದ 45 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಭಾನುವಾರ ಗುಡ್ಡಗಾಡು ಜಿಲ್ಲೆಗಳಾದ ನೀಲಗಿರಿ, ಕೊಯಮತ್ತೂರು, ದಿಂಡಿಗಲ್, ಥೇಣಿ, ತೆಂಕಶಿ, ತಿರುನಲ್ವೇಲಿ, ಮಧುರೈ, ಕನ್ನಿಯಾಕುಮಾರಿ, ಶಿವಗಂಗೈ, ರಾಮನಾಥಪುರಂ, ತೂತುಕ್ಕುಡಿ, ಪುದುಕೋಟ, ತಂಜಾವೂರುಗಳಲ್ಲಿ ಗುಡುಗು, ಮಿಂಚಿನ ಸಮೇತ ಮಳೆಯಾಗಲಿದೆ ಎಂದು ತಿಳಿಸಿದೆ.
ಅಲ್ಲದೆ, ಕೋವೈ, ನೆಲ್ಲೈ, ನೀಲಗಿರಿ, ತಿರುಪ್ಪೂರ್, ಥೇಣಿ, ದಿಂಡಿಗಲ್, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿ, ಅರಿಯಲೂರ್, ಪೆರಂಬಲೂರು, ತಂಜಾವೂರು, ಪುದುಕೋಟ, ಕನ್ಯಾಕುಮಾರಿ ಮತ್ತು ಮಧುರೈ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗುವ ಸಾಧ್ಯತೆ ಇದೆ.
ಚೆನ್ನೈ ಹಾಗೂ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಕಾಶವು ಮೋಡ ಕವಿದ ವಾತಾವರಣವಿರುತ್ತದೆ. ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಇರಲಿದ್ದು, ಮಳೆ ನಿರೀಕ್ಷಿಸಲಾಗಿದೆ.