ಧಾರಾಕಾರ ಮಳೆಗೆ ತತ್ತರಿಸಿದ ತಿರುಪತಿ; ಭಕ್ತರು ಕ್ಯೂ ನಿಲ್ಲೋ ಸ್ಥಳದಲ್ಲೇ ಹೊಳೆ; ಕೊಚ್ಚಿಕೊಂಡು ಹೋದ ವಾಹನಗಳು..

Thirupathi F
Published on

ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ, ತಿರುಪತಿ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಬಿಡದೇ ಸುರಿಯುತ್ತಿರುವ ಮಳೆಗೆ ರಸ್ತೆಗಳೆಲ್ಲ ಹೊಳೆಯಾಗಿವೆ.

ಬಹುತೇಕ ಎಲ್ಲ ಪ್ರದೇಶಗಳು ಜಲಾವೃತವಾಗಿರುವುದಷ್ಟೇ ಅಲ್ಲದೆ, ನಗರದ ರಸ್ತೆಗಳಲ್ಲಿ ಕೃತಕ ಹೊಳೆಗಳು ಸೃಷ್ಟಿಯಾಗಿವೆ. ವಾಹನಗಳು, ಮನೆಯಲ್ಲಿದ್ದ ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ಕೆಲವೆಡೆ ಜನರು ಕೂಡ ನೀರುಪಾಲಾಗಿದ್ದು, ಹಾನಿಯ ಅಂದಾಜು, ಸಾವು-ನೋವಿನ ಪ್ರಮಾಣಗಳ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net