ಬಿಸಿಯೂಟ ಜವಾಬ್ದಾರಿಯಿಂದ ಮುಕ್ತಗೊಳಿಸಿ

21 YLB 03
ಯಲಬುರ್ಗಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ.ದಾನಿಗೆ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು. ಘಟಕದ ತಾಲೂಕು ಅಧ್ಯಕ್ಷ ಶರಣಯ್ಯ ಸರಗಣಾಚಾರ, ಪದಾಧಿಕಾರಿಗಳಾದ ಮಹೇಶ ಕಟಗೇರಿ, ರುದ್ರಗೌಡ ಗೋಣಿ, ನಾಗಪ್ಪ ಬೆಟಗೇರಿ, ಶಿವಪ್ಪ ಬಾಗಲಿ, ಬಸವರಾಜ ಅಂಗಡಿ, ಶರಣಪ್ಪ ಇಟಗಿ, ಶಾಂತಾ ಜಂತ್ಲಿ, ರೇಣುಕಾ ಬಾಗಲಿ ಇದ್ದರು.
Published on

ಯಲಬುರ್ಗಾ: ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ತಾಲೂಕು ಘಟಕದಿಂದ ಪಟ್ಟಣದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ.ದಾನಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಘಟಕದ ತಾಲೂಕು ಅಧ್ಯಕ್ಷ ಶರಣಯ್ಯ ಸರಗಣಾಚಾರ ಮಾತನಾಡಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ ಬಹಳಷ್ಟು ಒತ್ತಡದ ಕಾರ್ಯಗಳು ಇದ್ದು, ಅವುಗಳಿಂದ ಮುಕ್ತಗೊಳಿಸಬೇಕು. ಬಿಸಿಯೂಟದ ಕಾರ್ಯದ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು. ಮಕ್ಕಳಿಗೆ ನೀಡುವ ಮೊಟ್ಟೆ ದರವನ್ನು ಇಲಾಖೆ ನೀಡುವ ದರಕ್ಕಿಂತ ಹೆಚ್ಚಿದ್ದು, ದರ ಪರಿಶೀಲನೆಗೊಳಿಸಿ ಮೊಟ್ಟೆ ದರ ಹೆಚ್ಚಿಸಬೇಕು.

ಬೇಸಿಗೆ ರಜೆ ಅವಧಿಯಲ್ಲಿ ಬಿಸಿಯೂಟ ಕಾರ್ಯನಿರ್ವಹಿಸುವ ಮುಖ್ಯಶಿಕ್ಷಕರ ಹಾಗೂ ಸಹಶಿಕ್ಷಕರ ಗಳಿಕೆ ರಜೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಬೇಕು. ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಆಹಾರ ಧಾನ್ಯ ಮತ್ತು ಅನುದಾನ ಬಳಕೆಯ ನಿಖರ ಮಾಹಿತಿ ನೀಡಬೇಕು. ಹಿರೇವಂಕಲಕುಂಟಾ ಭಾಗದ ಶಾಲೆಗಳ ಎಸ್ಡಿಎಂಸಿ ಖಾತೆಯನ್ನು ಕುಷ್ಟಗಿ ಕೆನರಾ ಬ್ಯಾಂಕ್‌ಗೆ ವರ್ಗಾಯಿಸಬೇಕು. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಮುಖ್ಯಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಮಹೇಶ ಕಟಗೇರಿ, ಮಾಲತೇಶ, ಚಿನ್ನಬಾಷಾ ಅತ್ತಾರ, ವೀರಪ್ಪ ಗಾಣಿಗೇರ, ಶಿವಯೋಗಪ್ಪ ಜಾಲಿಹಾಳ, ಹನುಮಪ್ಪ ಬಸರಿಗಿಡದ, ಶಿವಪುತ್ರಪ್ಪ ಕಟ್ಟಿಮನಿ, ಶಿವಾನಂದ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net