VIDEO: ಪ್ಲಾಸ್ಟಿಕ್ ಬಾಟಲ್ ಸೇವಿಸಿದ ಆನೆ..! ಪ್ರವಾಸಿಗರ ಬೇಜವಾಬ್ದಾರಿತನಕ್ಕೆ ಸಾಕ್ಷಿ

1355699
Published on

ಚಾಮರಾಜನಗರ: ಪರಿಸರ ಕಾಳಜಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಭೂಮಿಯಲ್ಲಿ ಸಕಲ ಜೀವಿಗೂ ಬದುಕುವ ಹಕ್ಕಿದೆ. ಆದರೆ ಮನುಷ್ಯ ಮಾತ್ರ ಪ್ರಾಣಿಗಳ ಆವಾಸಸ್ಥಾನಕ್ಕೆ ತೊಂದರೆ ಕೊಡುತ್ತಿದ್ದಾನೆ. ಮೋಜು, ಮಸ್ತಿ, ಪ್ರವಾಸವೆಂದು ಕಾಡಿಗೆ ತೆರಳಿ, ಪ್ರಾಣಿಗಳ ನೆಮ್ಮದಿಯ ಜೀವನಕ್ಕೆ ಭಂಗ ತರುತ್ತಿದ್ದಾನೆ.

ಪ್ರವಾಸ, ಮೋಜು, ಮಸ್ತಿಯೆಂದು ಕಾಡಿಗೆ ತೆರಳಿ ಅಲ್ಲಿನ ಪರಿಸರವನ್ನು ಮಲಿನ ಮಾಡುವ ಕೆಲಸ ನಿರಂತರವಾಗಿ ಮಾಡುತ್ತಲೇ ಇದೆ. ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್​ ಕಸವನ್ನೆಲ್ಲಾ ಎಲ್ಲೆಂದರಲ್ಲಿ ಎಸೆಯುವ ಮೂಲಕ ಪ್ರಾಣಿಗಳ ಹೊಟ್ಟೆ ಸೇರುವಂತೆ ಮಾಡುತ್ತಿದ್ದಾರೆ. ಪ್ಲಾಸ್ಟಿಕ್​ಗಳು ಪ್ರಾಣಿಗಳ ದೇಹ ಹೊಕ್ಕು, ಮೃತಪಟ್ಟ ಪ್ರಕರಣಗಳು ಸಾಕಷ್ಟಿವೆ.

ಪ್ರವಾಸಿಗರು ಎಸೆಯುವ ಪ್ಲಾಸ್ಟಿಕ್​ಗಳು ವನ್ಯಜೀವಿಗಳ ಹೊಟ್ಟೆ ಸೇರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಆನೆಯೊಂದು ಪ್ಲಾಸ್ಟಿಕ್ ಬಾಟಲ್​ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಂಡೀಪುರ -ಮದುಮಲೈ ಅರಣ್ಯ ನಡುವಿನ ರಸ್ತೆಯಲ್ಲಿ ಎನ್ನಲಾದ ವಿಡಿಯೋ ಪ್ರವಾಸಿಗರ ಬೇಜವಾಬ್ದಾರಿಗೆ ಸಾಕ್ಷಿಯೆಂಬಂತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಪ್ರಿಯರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net