AI ಬಳಸಿ 7 ಸೆಕೆಂಡ್​ನಲ್ಲಿ ಹೃದಯ ಕಾಯಿಲೆ ಪತ್ತೆ: ವೈದ್ಯಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಭಾರತೀಯ ಬಾಲಕ! Heart disease

Heart disease
Published on

Heart disease : ಸಿದ್ಧಾರ್ಥ್ ನಂದ್ಯಾಲ್ ಹೆಸರಿನ ಭಾರತೀಯ ಮೂಲದ 14 ವರ್ಷದ ಬಾಲಕ ಸರ್ಕಾಡಿಯನ್ ಎಐ ಎಂಬ ಹೊಸ ಆ್ಯಪ್ ಆವಿಷ್ಕಾರದೊಂದಿಗೆ ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಚಲನ ಮೂಡಿಸಿದ್ದಾರೆ.

ಅಮೆರಿಕದ ಡಲ್ಲಾಸ್‌ನಲ್ಲಿ ವಾಸಿಸುವ ಈ ಯುವ ಪ್ರತಿಭೆ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆ್ಯಪ್, 7 ಸೆಕೆಂಡುಗಳ ಹೃದಯ ಧ್ವನಿ ರೆಕಾರ್ಡಿಂಗ್ ಬಳಸಿ ಹೃದಯದ ಆರೋಗ್ಯವನ್ನು ಪತ್ತೆ ಮಾಡುತ್ತದೆ.

ಒರಾಕಲ್ ಮತ್ತು ARM ನಿಂದ ಪ್ರಮಾಣೀಕರಣಗಳನ್ನು ಹೊಂದಿರುವ ಸಿದ್ಧಾರ್ಥ್, ವಿಶ್ವದ ಅತ್ಯಂತ ಕಿರಿಯ AI-ಪ್ರಮಾಣೀಕೃತ ವೃತ್ತಿಪರ. ಸಿದ್ಧಾರ್ಥ್ ಅವರ ಆವಿಷ್ಕಾರವನ್ನು ಸಾವಿರಾರು ರೋಗಿಗಳ ಮೇಲೆ ಪರೀಕ್ಷಿಸಲಾಗಿದ್ದು, ಯಶಸ್ವಿ ಕೂಡ ಆಗಿದೆ.

ಅಮೆರಿಕದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ ಮತ್ತು ಜೋ ಬೈಡೆನ್ ಅವರಿಂದ ಸಿದ್ಧಾರ್ಥ್​, ಮೆಚ್ಚುಗೆಯ ಪತ್ರಗಳನ್ನು ಸಹ ಪಡೆದಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೂಡ ಕಳೆದ ತಿಂಗಳು ಸಿದ್ಧಾರ್ಥ್ ಅವರನ್ನು ವೈಯಕ್ತಿಕವಾಗಿ ಭೇಟಿಯಾದಾಗ ಅವರನ್ನು ಹೊಗಳಿದರು.

ಹೈದರಾಬಾದ್‌ನಲ್ಲಿ ಜನಿಸಿದ ಸಿದ್ಧಾರ್ಥ್ ಅವರ ಕುಟುಂಬವು ಬಾಲ್ಯದಲ್ಲಿಯೇ ಅಮೆರಿಕಕ್ಕೆ ಸ್ಥಳಾಂತರಗೊಂಡಿತು. ವಿಶ್ವಾದ್ಯಂತ ಸುಮಾರು 31% ಸಾವುಗಳು ಹೃದಯ ಕಾಯಿಲೆಯಿಂದ ಸಂಭವಿಸುತ್ತವೆ ಎಂದು ಅರಿತುಕೊಂಡಾಗ ಅವರು ಈ ಕ್ಷೇತ್ರಕ್ಕೆ ಆಕರ್ಷಿತರಾದರು ಎಂದು ಸಿದ್ಧಾರ್ಥ್ ಹೇಳಿದರು.

ಈ ಅಪ್ಲಿಕೇಶನ್ ಶೇ. 96 ರಷ್ಟು ಹೆಚ್ಚಿನ ನಿಖರತೆಯ ಪ್ರಮಾಣವನ್ನು ಹೊಂದಿದೆ. ಇದನ್ನು ಅಮೆರಿಕದಲ್ಲಿ 15,000 ಕ್ಕೂ ಹೆಚ್ಚು ರೋಗಿಗಳು ಮತ್ತು ಭಾರತದಲ್ಲಿ 700 ಕ್ಕೂ ಹೆಚ್ಚು ರೋಗಿಗಳ ಮೇಲೆ ವ್ಯಾಪಕವಾಗಿ ಪರೀಕ್ಷಿಸಲಾಗಿದೆ. ಇತ್ತೀಚಿನ ಪ್ರಯೋಗಗಳನ್ನು ಆಂಧ್ರಪ್ರದೇಶದ ಜಿಜಿಹೆಚ್ ಗುಂಟೂರು ಮತ್ತು ಜಿಜಿಹೆಚ್ ವಿಜಯವಾಡದಲ್ಲಿ ನಡೆಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net