ಬಸವ ತತ್ವ ಅಳವಡಿಸಿಕೊಂಡರೆ ಜೀವನ ಪಾವನ: ಶಾಸಕ ಪ್ರಕಾಶ

13-RNR-04
Published on

ರಾಣೆಬೆನ್ನೂರ: ಭಾರತದ ಯುವಜನತೆ ಬಸವ ತತ್ವ ಅಳವಡಿಸಿಕೊಂಡು "ಕಾಯಕವೇ ಕೈಲಾಸ' ಎಂಬ ಬಸವಣ್ಣನವರ ಧ್ಯೇಯದಂತೆ ನಡೆದುಕೊಂಡರೆ ಪ್ರತಿಯೊಬ್ಬರ ಜೀವನ ಪಾವನವಾಗುತ್ತದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ದಾವಣಗೆರೆಯ ವಿಶ್ವ ಬಸವ ಚೈತನ್ಯ ಸಮಿತಿಯ ವಾಷಿರ್ಕೋತ್ಸವದ ಅಂಗವಾಗಿ ನಗರದ ಎಸ್​ಜೆಎಂವಿ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರ ಹಾಗೂ ಬಸವ ಕಿರಣ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಮಾಜದಲ್ಲಿ ಹೃದಯ ರೋಗ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.

ವೈದ್ಯೆ ಡಾ. ವಿಜಯಲಕ್ಷಿ$್ಮ ಬಾಳೆಕುಂದ್ರಿ ಅವರಿಗೆ ಬಸವ ಕಿರಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು ಹೃದಯ ರೋಗದ ಲಕ್ಷಣಗಳು, ತಪಾಸಣೆ ವಿಧಾನಗಳು ಹಾಗೂ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು.

ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಮುಖರಾದ ನಂದೀಶ್ವರ ಶಿಡ್ಲಳ್ಳಿ, ಮಹೇಶಪ್ಪ ಕುಸಗೂರು, ಡಾ. ಅರುಣ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net