ಆಟವಾಡುವಾಗ್ಲೆ ಬಂತು ಹಾರ್ಟ್​ ಅಟ್ಯಾಕ್​; ಕುಸಿದು ಬಿದ್ದು ಮೃತಪಟ್ಟ ಮಾರ್ಷಲ್​ ಆರ್ಟ್ಸ್​ ಆಟಗಾರ | Viral Video

dk - 2025-02-25T184948.590
Published on

Viral Video: ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಆಟವಾಡುತ್ತಿದ್ದ ಆಟಗಾರನಿಗೆ ಹೃದಯಘಾತವಾಗಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವುಶು ಆಟಗಾರ (ಮಾರ್ಷಲ್​ ಆರ್ಟ್ಸ್​) ಮೋಹಿತ್​ ಶರ್ಮಾ(21) ಮೃತ.  ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಚಾಪೆಯ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣ ವೈದ್ಯರು ಆರೈಕೆಯ ಮಾಡಿದ್ದಾರದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಈ ಕುರಿತು ವಿಡಿಯೋವೊಂದು ವೈರಲ್​ ಆಗಿದೆ.

ಸಾವಿಗೆ ನಿಖರವಾದ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ, ಇದು ಹೃದಯ ಸಮಸ್ಯೆ ಅಥವಾ ಇತರ ಆಧಾರವಾಗಿರುವ ವೈದ್ಯಕೀಯ ಸ್ಥಿತಿಗೆ ಸಂಬಂಧಿಸಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net