

ನವದೆಹಲಿ: ಹಲವಾರು ಕೇಂದ್ರ ಮತ್ತು ನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಕೋವಿಡ್- 19 ರೋಗಿಗಳ ಚಿಕಿತ್ಸೆ ನೀಡುವ ಕರ್ತವ್ಯ ಮುಗಿದ ನಂತರ ತಮ್ಮ ಕ್ವಾರಂಟೈನ್ ಅವಧಿ ಮುಗಿಸಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಹಲವು ಆಸ್ಪತ್ರೆಗಳು ಕ್ವಾರಂಟೈನ್ ಅವಧಿಯಲ್ಲಿ ಹೊಟೆಲ್ಗಳಲ್ಲಿ ಉಳಿದುಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ಶೀಘ್ರವೇ ಕೊಠಡಿ ಖಾಲಿ ಮಾಡಲು ತಿಳಿಸುತ್ತಿದ್ದು, ತಪ್ಪಿದಲ್ಲಿ ಅವರ ಸಂಬಳದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿವೆ.
ಇದನ್ನೂ ಓದಿ: Video ] ಮಣ್ಣಿನ ಸ್ನಾನದಲ್ಲಿ ಬಿಜಿಯಾಗಿರುವ ಗಜರಾಜ
ಮೇ 15 ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ -19 ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಪಿಪಿಇ ಕೊರತೆ ಅಥವಾ ಇತರ ಯಾವುದೇ ಹೆಚ್ಚಿನ ಅಪಾಯ ಇಲ್ಲದಿದ್ದಲ್ಲಿ ಕ್ವಾರಂಟೈನ್ನಲ್ಲಿರಬೇಕಾದ ಅಗತ್ಯವಿಲ್ಲ.
ಈ ಹಿನ್ನೆಲೆ ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಮುಖವಾಗಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಹೊಸ ಮಾರ್ಗಸೂಚಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ಕ್ವಾರಂಟೈನ್ ಹಾಗೂ ಪರೀಕ್ಷಾ ವಿಧಾನ ಸೇರಿ ಮತ್ತಿತರ ಬೇಡಿಕೆಗಳಿಗೆ ಒತ್ತಾಯಿಸಿ ರೆಸಿಡೆಂಟ್ ವೈದ್ಯರ ಸಂಘ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಕರೆ ನೀಡಿತ್ತು. ‘
ಇದನ್ನೂ ಓದಿ: VIDEO ] ಮಾತೃಶಕ್ತಿಗೆ ಸೋತ ನಾಗರಹಾವು
ಕರೊನಾ ವೈರಸ್ ಸುಮಾರು 2-14 ದಿನಗಳವರೆಗೆ ಜೀವಂತವಾಗಿರಲಿದ್ದು, ಕೋವಿಡ್- 19 ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರಿಗೆ ಎರಡನೇ ಪರೀಕ್ಷೆ ಹಾಗೂ ಅದರ ನಂತರದ ಪರೀಕ್ಷೆಯಲ್ಲಿ ಕೂಡ ಸೋಂಕು ಪತ್ತೆಯಾದ ಹಲವು ಉದಾಹರಣೆಗಳಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪರಿಷ್ಕರಿಸಬೇಕೆಂದು ಒಕ್ಕೂಟ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ತಿಳಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ -19 ಚಿಕಿತ್ಸೆ ನೀಡುತ್ತಿರುವ ಎಲ್ಲ ವೈದ್ಯರು ಕುಟುಂಬ ವರ್ಗದವರಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು, ವೈದ್ಯರು ತಮ್ಮ ಕರ್ತವ್ಯ ಮುಗಿದ ನಂತರ ಸೂಕ್ತ ಪರೀಕ್ಷೆಯ ಜತೆಗೆ 7 ದಿನ ಕ್ವಾರಂಟೈನ್ ನಲ್ಲಿರಬೇಕಾದುದು ಅವಶ್ಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಡಾ. ಶಿವಾಜಿ ದೇವ್ ಬರ್ಮನ್ ತಿಳಿಸಿದ್ದಾರೆ.