ತೆಲಂಗಾಣದ ಆರೋಗ್ಯಾಧಿಕಾರಿಗಳಿಗೆ ತಲೆನೋವಾಯ್ತು ಪಾನಿಪುರಿ: ಸಾಂಕ್ರಾಮಿಕ ರೋಗ ತಡೆಗಟ್ಟಲು ಇನ್ನಿಲ್ಲದ ಪ್ರಯತ್ನ!

Paanipoorityphoid
Published on

ಹೈದರಾಬಾದ್​: ಪಾನಿಪುರಿ ಯಾರಿಗೆ ಇಷ್ಟವಿಲ್ಲ, ಅತ್ಯಂತ ಜನಪ್ರಿಯ ಸ್ಟ್ರೀಟ್​ಫುಡ್​ಗಳಲ್ಲಿ ಪಾನಿಪುರಿಗೆ ಅಗ್ರಸ್ಥಾನ. ಸದ್ಯ ಈ ಪಾನಿಪುರಿ ಈಗ ಆರೋಗ್ಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.ಸಂಜೆಯಾಗುತ್ತಲೇ ಜನರು ಹೆಚ್ಚಾಗಿ ತಿನ್ನಲು ಇಷ್ಟಪಡುವ ಚಾಟ್ಸ್ ಪಾನೀಪುರಿ ಆದರೆ ಇದರಿಂದಲೇ ಈಗ ಆಪತ್ತು ಇದೆ ಎಂದು ತೆಲಂಗಾಣದ ಆರೋಗ್ಯಾಧಿಕಾರಿಗಳ ಆರೋಪವಾಗಿದೆ.

ಪಾನಿಪುರಿ ತಯಾರಿಸುವ ವೇಳೆ ಸ್ವಚ್ಛತೆಯನ್ನು ಕಾಪಾಡುವುದಿಲ್ಲ ಎಂಬುದು ಮೊದಲಿನಿಂದಲೂ ಕೇಳಿಬರುತ್ತಿರುವ ಆರೋಪ. ಇದು ಹಲವೆಡೆ  ಕಾಣುತ್ತಿದ್ದೇವೆ, ಇದು ಸತ್ಯವೂ ಹೌದು ಇದೀಗ ಇದರಿಂದಲೇ ರೋಗಗಳು ಹರಡಲು ಕಾರಣವಾಗುತ್ತಿದೆ ಎಂದು ತೆಲಂಗಾಣ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಮಳೆಗಾಲದಲ್ಲಿ ಹೆಚ್ಚಾಗಿ ಟೈಫಾಯ್ಡ್ ಪ್ರಕರಣಗಳು ತೆಲಂಗಾಣದಲ್ಲಿ ದಾಖಲಾಗಿವೆ. ಇದರ ಬೆನ್ನತ್ತಿ ಹೊರಟ ಆರೋಗ್ಯಾಧಿಕಾರಿಗಳಿಗೆ ಸಿಕ್ಕಿದ್ದು ಪಾನಿಪುರಿ, ಹೌದು.. ಇದರಿಂದಲೇ ಟೈಫಾಯ್ಡ್​​ ಜ್ವರ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯನ್ನೂ ನೀಡಿದ್ದಾರೆ.

ಮೇ ತಿಂಗಳಿನಿಂದ ಈವರೆಗೆ 2700 ಪ್ರಕರಣಗಳು ದಾಖಲಾಗಿದೆ. ಜುಲೈ ತಿಂಗಳಲ್ಲಿ 2752ಕ್ಕೆ ಏರಿಕೆಯಾಗಿವೆ. ಈ ಕಾಯಿಲೆ ಬರುತ್ತಿರುವುದೇ ಬೀದಿಬದಿಯ ಆಹಾರಗಳಿಂದಲೇ ಎಂಬುದು ಖಚಿತಗೊಂಡಿದೆ. ಜನರು ಹೆಚ್ಚಾಗಿ ಪಾನಿಪುರಿ ತಿನ್ನುತ್ತಿರುವುದರಿಂದಲೇ ಟೈಫಾಯ್ಡ್​ ಕಾಣಿಸಿಕೊಳ್ಳುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ್​ ರಾವ್​ ಸ್ಪಷ್ಟನೆ ನೀಡಿದ್ದಾರೆ. ಸ್ವಚ್ಚ ಕುಡಿಯುವ ನೀರು, ಆಹಾರ ಸೇವನೆಯಿಂದ ರೋಗಗಳನ್ನು ತಡೆಗಟ್ಟಬಹುದು. ಬೀದಿಬದಿ ಆಹಾರಗಳಿಂದ ಇನ್ನೂ ಹೆಚ್ಚು ರೋಗಗಳು ಕಾಣಿಸಿಕೊಳ್ಳುತ್ತವೆ. ಜನರು ಮಳೆಗಾಲದಲ್ಲಿ ಇದನ್ನು ತಿನ್ನಬಾರದು ಎಂದು ಸಲಹೆ ನೀಡಿದ್ದಾರೆ.

ಮಳೆಗಾಲ ಪ್ರಾರಂಭವಾದಾಗಿನಿಂದ ಟೈಫಾಯ್ಡ್​ ಹೊರತುಪಡಿಸಿ ಮಲೇರಿಯಾ, ಡೆಂಗ್ಯೂ, ವೈರಲ್​ ಫೀವರ್​ನಂತಹ 6000 ಪ್ರಕರಣಗಳು ಕಂಡುಬಂದಿವೆ ಎಂದು ಹೇಳಿದ್ದಾರೆ. ಸದ್ಯ ಬೀದಿಬದಿಯ ಆಹಾರದಿಂದಾಗಿ ತೆಲಂಗಾಣದ ಆರೋಗ್ಯಾಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net