ಡೆಂಗ್ಯೂ ತಡೆಗೆ ಆರೋಗ್ಯ ಕಾರ್ಯಪಡೆ ಸಭೆ

28HDK06
Published on

ಸರಗೂರು : ಮನೆ ಪರಿಸರವನ್ನು ಶುಚಿಯಾಗಿ ಇಟ್ಟುಕೊಂಡರೆ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ಆರೋಗ್ಯಾಧಿಕಾರಿ ಡಾ. ಟಿ. ರವಿಕುಮಾರ್ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಡೆಂಗ್ಯೂ ಜ್ವರ ನಿಯಂತ್ರಣದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಂಗಳವಾರ ಆರೋಗ್ಯ ಕಾರ್ಯಪಡೆ (ಟಾಸ್ಕ್ ಫೋರ್ಸ್) ಸಮಿತಿ ಹಮ್ಮಿಕೊಂಡಿದ್ದ
ತಾಲೂಕು ಮತ್ತು ಗ್ರಾಪಂ ಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರು ನಿಲ್ಲದಿರಲಿ: ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಇಷ್ಟು ಮಾತ್ರಕ್ಕೆ ಇಷ್ಟು ಮಾತ್ರಕ್ಕೆ ಯಾವುದೇ ಸಾಂಕ್ರಾಮಿಕ ರೋಗ ತಡೆ ಆಗುವುದಿಲ್ಲ. ಮನೆಯ ಸುತ್ತಲಿನ ಪ್ರದೇಶವನ್ನೂ ಅಷ್ಟೇ ಕಾಳಜಿಯಿಂದ ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಎಲ್ಲಿಯೂ ನೀರು ಮಡುಗಟ್ಟಿ ನಿಲ್ಲದಂತೆ ಕ್ರಮ ವಹಿಸಬೇಕು. ಇದು ಎಲ್ಲರ ಕರ್ತವ್ಯ ಆಗಬೇಕು. ಈ ದಿಸೆಯಲ್ಲಿ ಸೂಕ್ತ ಗಮನ ಕೊಡಿ ಎಂದು ಡಾ. ಟಿ ರವಿಕುಮಾರ್ ಸೂಚಿಸಿದರು.
ಮಳೆಗಾಲದಲ್ಲಿ ಅತಿಯಾಗುವ ಸೊಳ್ಳೆಗಳ ಸಂತತಿಯಿಂದ ಬರುವ ಕೆಲವು ಅಪಾಯಕಾರಿ ಜ್ವರಗಳಲ್ಲಿ ಡೆಂಗ್ಯೂ ಕೂಡಾ ಒಂದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ರವಿ ಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net