ಸೂರ್ಯ ನಮಸ್ಕಾರದಿಂದ ಆರೋಗ್ಯ ವೃದ್ಧಿ

shivaganga
ಶಿವಮೊಗ್ಗದ ಶಿವಗಂಗಾ ಯೋಗಕೇಂದ್ರದಲ್ಲಿ ರಥಸಪ್ತಮಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿ.ವಿ.ರುದ್ರಾರಾಧ್ಯ, ಡಾ.ನಾಗರಾಜ ಪರಿಸರ, ಓಂಕಾರ್, ಚಂದ್ರಶೇಖರ್, ನೀಲಕಂಠರಾವ್, ಜಗದೀಶ್, ಜಿ.ವಿಜಯಕುಮಾರ್ ಇತರರಿದ್ದರು.
Published on

ಶಿವಮೊಗ್ಗ: ಸೂರ್ಯ ನಮಸ್ಕಾರದಿಂದ ಸರ್ವ ರೋಗಗಳೂ ಗುಣವಾಗುವ ಜತೆಗೆ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ ಎಂದು ಶಿವಗಂಗಾ ಯೋಗ ಕೇಂದ್ರದ ಯೋಗ ಗುರು ಸಿ.ವಿ.ರುದ್ರಾರಾಧ್ಯ ಹೇಳಿದರು.

ರಥಸಪ್ತಮಿ ಅಂಗವಾಗಿ ಶಿವಗಂಗಾ ಯೋಗಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂರ್ಯ ನಮಸ್ಕಾರ ಆಸನಗಳ ರಾಜ. ಎಲ್ಲ ಅಂಗಾಂಗಗಳಿಗೂ ಚೆನ್ನಾಗಿ ರಕ್ತಸಂಚಾರ ಆಗುತ್ತದೆ. ಸೂರ್ಯ ನಮಸ್ಕಾರ ನಿರಂತರ ಅಭ್ಯಾಸದಿಂದ ಆರೋಗ್ಯ ರಕ್ಷಿಸಿಕೊಳ್ಳಬಹುದು ಎಂದರು.

ಸಕಲ ಜೀವರಾಶಿಗೂ ಸೂರ್ಯ ಬೇಕು. ಸೂರ್ಯನಿಲ್ಲದಿದ್ದರೆ ಬದುಕೇ ಇಲ್ಲ. ಸೂರ್ಯದೇವನನ್ನು ಪ್ರಾರ್ಥಿಸಿ ಶಕ್ತಿ ಅನುಸಾರ ನಮಸ್ಕಾರಗಳನ್ನು ಮಾಡಿದರೆ ಆರೋಗ್ಯ ವೃದ್ಧಿಯಾಗುವುದು ಎಂದು ತಿಳಿಸಿದರು.

ಬೆಳಗ್ಗೆ 5.30ಕ್ಕೆ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿ 6 ಗಂಟೆಗೆ ಸರಿಯಾಗಿ ಅಖಂಡ ಸೂರ್ಯ ನಮಸ್ಕಾರ ಪ್ರಾರಂಭವಾಯಿತು. ಯೋಗ ಗುರು ಡಾ. ಪದ್ಮನಾಭ ಅಡಿಗ ಅವರು ರಥಸಪ್ತಮಿ ಹಾಗೂ ಸೂರ್ಯ ನಮಸ್ಕಾರದ ಪ್ರಾಮುಖ್ಯತೆ ಕುರಿತು ವಿವರಿಸಿದರು.

ಶಿವಗಂಗಾ ಯೋಗ ಕೇಂದ್ರದ ಎಲ್ಲ ಶಾಖೆಗಳಿಂದ ಸಾವಿರಕ್ಕೂ ಹೆಚ್ಚು ಶಿಕ್ಷಣಾರ್ಥಿಗಳು ಸೂರ್ಯ ನಮಸ್ಕಾರ ಮಾಡಿದರು. 300ಕ್ಕೂ ಹೆಚ್ಚು ಶಿಬಿರಾರ್ಥಿಗಳು 12 ಮಂಡಲ ಸೂರ್ಯ ನಮಸ್ಕಾರ ಮಾಡಿದರು. ಚಂದ್ರಶೇಖರಯ್ಯ, ಓಂಕಾರ್, ಡಾ. ನಾಗರಾಜ ಪರಿಸರ, ಜಿ.ವಿಜಯಕುಮಾರ್, ಜಗದೀಶ್, ಲವಕುಮಾರ, ಹರೀಶ್, ನೀಲಕಂಠ ರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net