

ಸೊರಬ: ಪಟ್ಟಣದ ಮ್ಯಾಮ್ಕೋಸ್ ಶಾಖಾ ಆವರಣದಲ್ಲಿ ಮ್ಯಾಮ್ಕೋಸ್ ಸದಸ್ಯರು ಹಾಗೂ ಕುಟುಂಬದವರಿಗೆ ಶಿವಮೊಗ್ಗ ಎನ್‌ಯು ಆಸ್ಪತ್ರೆ ಸಯೋಗದಲ್ಲಿ ಮಂಗಳವಾರ ಆರೋಗ್ಯ ತಪಾಸಣೆ ಮಾಡಲಾಯಿತು. ಮ್ಯಾಮ್ಕೋಸ್ ನಿರ್ದೇಶಕ ಕೀರ್ತಿರಾಜ್ ಕಾನಳ್ಳಿ ಮಾತನಾಡಿ, ರೈತರ ಹಿತ ಕಾಪಾಡುವ ದೃಷ್ಟಿಯಿಂದ ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಆರೋಗ್ಯ ತಪಾಸಣೆಯೂ ಒಂದು. ಸದಸ್ಯರಿಗೆ ಆಸ್ಪತ್ರೆಯಲ್ಲಿ ಹೊರ ರೋಗಿಗಳ ತಪಾಸಣೆಗೆ ಶೇ.50 ರಿಯಾಯಿತಿ, ಒಳರೋಗಿಗಳಿಗೆ ಶೇ.15, ಆರೋಗ್ಯ ತಪಾಸಣೆಗೆ ಶೇ.10, ಶಸಚಿಕಿತ್ಸೆಗೆ ಶೇ.15, ಲ್ಯಾಬ್ ತಪಾಸಣೆಗೆ ಶೇ.20, ಔಷಧ, ಮಾತ್ರೆಗಳಿಗೆ ಶೇ.10 ರಿಯಾಯಿತಿ ದೊರೆಯಲಿದೆ. 20 ಕಿ.ಮೀ. ಒಳಗಡೆ ಇರುವ ಸದಸ್ಯ ಹೊರ ರೋಗಿಗಳಿಗೆ ಉಚಿತವಾಗಿ ತಪಾಸಣೆ ಮಾಡಲಾಗುತ್ತದೆ. ಇದರ ವೆಚ್ಚವನ್ನು ಮ್ಯಾಮ್ಕೋಸ್ ಭರಿಸಲಿದೆ ಎಂದರು. ವ್ಯವಸ್ಥಾಪಕ ಕೆ.ಮಹೇಶ್ವರಪ್ಪ, ಜಗದೀಶ್, ಸುಮಂತ್, ಬಂಗಾರಸ್ವಾಮಿ, ನಿಂಗಪ್ಪ, ನೀಲಕಂಠ, ಯೋಗೇಶ್ ಇತರರಿದ್ದರು.