

ಬೇಲೂರು : ಕೆಲಸಗಳ ಒತ್ತಡದ ಬದುಕಿನ ನಡುವೆ ಬಿಡುವು ಮಾಡಿಕೊಂಡು ತಮ್ಮಗಳ ಆರೋಗ್ಯವನ್ನೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಬೇಲೂರಿನ ಶಿವನ್ ಪಾಲಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಎಚ್.ಆರ್.ನಾರಾಯಣಸ್ವಾಮಿ ಹೇಳಿದರು.
ಅಂತಾರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಸನ್ಯಾಸಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಾದಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶಿವನ್ ಪಾಲಿಕ್ಲಿನಿಕ್‌ನಿಂದ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಜೀವನದಲ್ಲಿ ಆರೋಗ್ಯ ಬಹಳ ಮುಖ್ಯವಾದದ್ದು. ಆದರೆ ಇತ್ತೀಚೆಗೆ ಆರೋಗ್ಯದ ಕಡೆ ಗಮನ ಕೊಡುವುದು ಕಡಿಮೆಯಾದ್ದರಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ರೋಗ ಬರುವುದಕ್ಕಿಂತ ಮುಂಚೆಯೇ ಮುನ್ನೆಚ್ಚರಿಕೆ ವಹಿಸಿದರೆ ರೋಗ ಬರುವುದನ್ನು ತಡೆಗಟ್ಟಬಹುದು ಎಂದರು.
ಶಿವನ್ ಪಾಲಿಮೆಡಿಕಲ್ ಮಾಲೀಕ ಸತೀಶ್, ಗ್ರಾಪಂ ಸದಸ್ಯೆ ಪಾರ್ವತಿ, ಶಿಕ್ಷಕರಾದ ಸಿದ್ದರಾಮೆಗೌಡ, ತೇಜಾಮಣಿ, ಸಿಬ್ಬಂದಿ ರಾಜಮಣಿ, ಅರ್ಪಿತಾ ಇತರರಿದ್ದರು.