ರುಂಡವಿಲ್ಲದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ..!

police 01
ಸಾಂದರ್ಭಿಕ ಚಿತ್ರ
Published on

ಜೋಧ್‌ಪುರ: ರಸ್ತೆ ಬದಿಯ ಪೊದೆಗಳಲ್ಲಿ ರುಂಡವಿಲ್ಲದ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿರುವ ಆಘಾತಕಾರಿ ಘಟನೆ ರಾಜಸ್ತಾನದ ಜೋಧಪುರದಲ್ಲಿ ನಡೆದಿದೆ.

ನ್ಯೂ ಪವರ್‌ಹೌಸ್ ಬಳಿ ಈ ಮೃತದೇಹ ದೊರೆತಿದ್ದು,ಘಟನೆಯ ಕುರಿತಾಗಿ ಭಾನುವಾರ ಬೆಳಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ತಲೆ ಕಡಿದ ಮಹಿಳೆಯ ಮೃತದೇಹ ಕಂಡಿದ್ದು, ಫೋರೆನ್ಸಿಕ್ ತಂಡ ಮತ್ತು ಶ್ವಾನದಳಗಳು ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ವೆಬ್ ಸರಣಿಯಿಂದ ಪ್ರೇರಣೆ: ದಂಪತಿಯ ಪ್ರಾಣ ತೆಗೆದು ಮನೆ ಲೂಟಿ ಮಾಡಿದ ಯುವಕರು..

ಮಹಿಳೆಯ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, ಈ ಕುರಿತು ಮಾತನಾಡಿದ ಡಿಸಿಪಿ ಗೌರವ್ ಯಾದವ್, ಮೃತದೇಹವು ಕಂಡ ಬಂದ ಸ್ಥಳೀಯರು ಮಾಹಿತಿಯನ್ನು ತಲುಪಿಸಿದ್ದಾರೆ. ತಮ್ಮ ತಂಡಗಳು ಈಗಾಗಲೇ ಕೆಲಸವನ್ನು ಮಾಡುತ್ತಿವೆ. ಯಾವುದಾದರೂ ರೈಲಿನಿಂದ ಈ ಅಪಘಾತ ಸಂಭವಿಸಬಹುದು ಎಂದು ಶಂಕಿಸಲಾಗಿದ್ದು, ತಾವು ಪ್ರಕರಣವನ್ನು ಕೊಲೆ ಮತ್ತು ಅಪಘಾತ ಎರಡೂ ದಿಕ್ಕಿನಿಂದ ಕಡೆಯಿಂದ ತನಿಖೆ ಮಾಡುತ್ತಿದ್ದೇವೆ. ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಶವ ಆಕೆಯ ಮನೆಯ ಸಮೀಪದ ಬಾವಿಯೊಂದರಲ್ಲಿ ಪತ್ತೆಯಾಗಿತ್ತು. ಸಂತ್ರಸ್ತೆಯ ಕುಟುಂಬದ ದೂರಿನ ಮೇರೆಗೆ ಬಾಲಕಿ ಓದುತ್ತಿದ್ದ ಶಾಲೆಯ ಶಿಕ್ಷಕನನ್ನು ಅನುಮಾನದ ಮೇಲೆ ಬಂಧಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net