ಕಂಟೇನರ್​ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ: 32 ವರ್ಷದ ವೈದ್ಯೆ ಸಾವು| Accident

untitled-design-87-689c65ba93467
Published on

Accident: ಕಂಟೇನರ್​ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 32 ವರ್ಷದ ಮಹಿಳಾ ವೈದ್ಯ ಸಾವನ್ನಪ್ಪಿರುವ ಘಟನೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ನಡೆದಿದೆ.

ಡಾ. ಪ್ರಿಯಾಂಕಾ ಅಹಿರ್ ಮೃತ ಎಂದು ಗುರುತಿಸಲಾಗಿದೆ. ರಾಯಘಢ ಜಿಲ್ಲೆಯ ಟೆಂಪಲೆಯಲ್ಲಿ ಮಹಾದ್​ ಕಡೆಗೆ ಚಲಿಸುತ್ತಿದ್ದ ಕಂಟೇನರ್​ ಪ್ರಿಯಾಂಕಾ ಅಹಿರ್ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್​ನ ಹಿಂದಿನ ಚಕ್ರಕ್ಕೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಹಾಗೂ ಕಾರಿನಲ್ಲಿದ್ದ ಮತ್ತೊರ್ವನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುದ್ದಿಮೂಲಗಳ ಪ್ರಕಾರ ಜನದಟ್ಟಣೆಯಿಂದ ಕೂಡಿದ್ದ, ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರ ಸ್ಥಗಿತಗೊಂಡಿದ್ದು, ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಗೋರೆಗಾಂವ್ ಪೊಲೀಸರು ಆಗಮಿಸಿದ್ದು, ಗಾಯಗೊಂಡ ಪ್ರಯಾಣಿಕರನ್ನು ಹೊರತೆಗೆಯಲು ಪ್ರಯತ್ನಿಸಿದರು.

ಕಂಟೇನರ್​ ವಾಹನವನ್ನು ಅಪಘಾತ ಸ್ಥಳದಿಂದ ಮೇಲೆಕ್ಕೆತ್ತಿದ್ದು, ಜನರಿಗೆ ಓಡಾಡಲು ಅವಕಾಶ ಮಾಡಿಕೊಡುವಲ್ಲಿ ಗೋರೆಗಾಂವ್  ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಕಂಟೇನರ್​ ಅತೀ ವೇಗದಿಂದ ಚಾಲನೆ ಮಾಡಿದ್ದು, ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net