ಹೆಡ್‌ಕಾನ್‌ಸ್ಟೆಬಲ್ ವಸಂತಕುಮಾರ್ ಅಮಾನತು

udp-18-suspended
Published on

ಬೆಂಗಳೂರು: ಲಂಚ ಪಡೆಯುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯ ಸಂಚಾರ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್ ವಸಂತಕುಮಾರ್‌ನನ್ನು ಅಮಾನತು ಮಾಡಲಾಗಿದೆ.
ವಸಂತಕುಮಾರ್ ವಿರುದ್ಧ ಸಾರ್ವಜನಿಕರಿಂದ ನಿರಂತರ ದೂರುಗಳು ಬಂದಿದ್ದವು. ಹೀಗಾಗಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಸಂಚಾರ ಪಶ್ಚಿಮ ವಿಭಾಗದ ಅನಿತಾ ತಿಳಿಸಿದ್ದಾರೆ. ಕೆ.ಆರ್.ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ವಸಂತಕುಮಾರ್ ಲಂಚ ಪಡೆಯುತ್ತಿದ್ದರು ಎಂಬ ಆರೋಪವಿತ್ತು. ವ್ಯಾಪಾರಿಗಳಿಂದ ದಾಖಲಾತಿ ಕೇಳುತ್ತಿದ್ದರು. ದಾಖಲೆಗಳನ್ನು ಕೊಡದಿದ್ದರೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂಬ ಆರೋಪ ಇತ್ತು. ಆದರಿಂದ ಕೆಲ ವ್ಯಾಪಾರಿಗಳು ನೇರವಾಗಿ ಮತ್ತು ಪರೋಕ್ಷವಾಗಿ ದೂರು ನೀಡಿದ್ದರು. ಈ ಮಧ್ಯೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಅದನ್ನೂ ಪರಿಶೀಲಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ಅವರ ಸೂಚನೆ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net