ಸಮಾಜ ಸುಧಾರಣೆಗಾಗಿ ಜೀವಿತ ಕಾಲದವರೆಗೂ ಶ್ರಮಿಸಿದ್ದರು

e72d6d92-0006-4ca1-be46-92ec9efdc01a
ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಕನಕದಾಸರ ಜಯಂತ್ಯುತ್ಸವ ಆಚರಿಸಲಾಯಿತು. ರಾಘವೇಂದ್ರ ಪ್ರಸನ್ನ, ಬಿ.ಆರ್.ಗೋವಿಂದನಾಯಕ, ಸಿ.ಎಸ್.ವೇದಮೂರ್ತಿ, ದಿನೇಶ್, ಶೀಲಾ, ಅಯ್ಯಣ್ಣ, ಮಹೇಶ್ ಇದ್ದರು.
Published on

ಬನ್ನಿಕುಪ್ಪೆ: ಕನಕದಾಸರು ದಾರ್ಶನಿಕರಲ್ಲಿ ಅತ್ಯಂತ ಶ್ರೇಷ್ಠರು. ಅವರು ಸಮಾಜಕ್ಕಾಗಿ, ಸಮಾಜದ ಸುಧಾರಣೆಗಾಗಿ ತಮ್ಮ ಜೀವಿತ ಕಾಲದವರೆಗೂ ದುಡಿದರು. ಅವರ ಮಾರ್ಗದರ್ಶನ, ಅವರ ನುಡಿಮುತ್ತುಗಳು, ತತ್ವ-ಸಿದ್ಧಾಂತಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಬನ್ನಿಕುಪ್ಪೆ ಗ್ರಾಪಂ ಪಿಡಿಒ ರಾಘವೇಂದ್ರ ಪ್ರಸನ್ನ ತಿಳಿಸಿದರು.

ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ 536ನೇ ಕನಕದಾಸರ ಜಯಂತ್ಯುತ್ಸವವ ಸಮಾರಂಭದಲ್ಲಿ ಮಾತನಾಡಿದ ಅವರು, ಕನಕದಾಸರು ನಡೆದು ಬಂದ ದಾರಿಯನ್ನು ಅನುಸರಿಸುತ್ತಾ ಸಮಾಜದ ಒಳಿತಿಗಾಗಿ ಎಲ್ಲರೂ ಕೆಲಸ ಮಾಡೋಣ. ಅವರನ್ನು ವರ್ಷಕ್ಕೊಮ್ಮೆ ಸ್ಮರಿಸುವ ಬದಲು ನಿತ್ಯ ಸ್ಮರಿಸೋಣ. ಅವರ ಜಯಂತಿಯನ್ನು ನಮ್ಮ ಗ್ರಾಮಗಳಲ್ಲಿ ಧಾರ್ಮಿಕ ಹಬ್ಬವನ್ನಾಗಿ ಆಚರಿಸುವಂತಾಗಲಿ ಎಂದರು.

ಗ್ರಾಪಂ ಸದಸ್ಯ ಎಂ.ಸಿ.ಚಂದ್ರಶೇಖರ ಮಾತನಾಡಿ, ದಾರ್ಶನಿಕರ ಜಯಂತಿ ಹಾಗೂ ಮಹನೀಯರ ಜಯಂತಿಯನ್ನು ಜಾತಿಗೆ ಸಿಮೀತಗೊಳಿಸಿರುವುದು ಬೇಸರದ ಸಂಗತಿ. ಎಲ್ಲ ಮಹನೀಯರು ನಮ್ಮ ಸಮಾಜಕ್ಕಾಗಿ ನಮ್ಮ ಒಳಿತಿಗಾಗಿ ತಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದರು. ಇವರ ಜಯಂತಿಯನ್ನು ಜಾತಿ, ಭೇದ ಮರೆತು ಒಗ್ಗಟ್ಟಾಗಿ ಭಕ್ತಿಪೂರ್ವಕವಾಗಿ ಆಚರಿಸಿ ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡಾಗ ಮಾತ್ರ ನಾವು ಈ ದೇಶದ ಪ್ರಜೆಗಳಾಗಲು ಸಾಧ್ಯ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಗೋವಿಂದನಾಯಕ, ಕಾರ್ಯದರ್ಶಿ ಸಿ.ಎಸ್.ವೇದಮೂರ್ತಿ, ಗ್ರಾಪಂ ಸದಸ್ಯರಾದ ದಿನೇಶ್, ಗ್ರಂಥಾಲಯ ಮೇಲ್ವಿಚಾರಕಿ ಶೀಲಾ, ಮುಖಂಡರಾದ ಅಯ್ಯಣ್ಣ, ಮಹೇಶ್, ವಿಜಯಕುಮಾರ್ ಇತರರು ಬಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net