ಕೆಲಸಕ್ಕೆ ಬರದೆ 12 ವರ್ಷ ಸಂಬಳ ಪಡೆದ

5-686d59fc375e3
Published on

ಭೋಪಾಲ್: ಮಧ್ಯಪ್ರದೇಶ ಪೊಲೀಸ್ ಇಲಾಖೆಗೆ 2011ರಲ್ಲಿ ನೇಮಕಗೊಂಡಿದ್ದ ವ್ಯಕ್ತಿಯೊಬ್ಬ 12 ವರ್ಷ ಕೆಲಸಕ್ಕೆ ಹಾಜರಾಗದಿದ್ದರೂ 28 ಲಕ್ಷ ರೂ. ಸಂಬಳ ಪಡೆದ ಘಟನೆ ಬೆಳಕಿಗೆ ಬಂದಿದೆ.

ಆರೋಪಿ ಕಾನ್​ಸ್ಟೆಬಲ್ 2011ರಲ್ಲಿ ಕೆಲಸಕ್ಕೆ ಸೇರಿದ್ದ. ಆತನಿಗೆ ಸಾಗರ್​ನಲ್ಲಿ ಪ್ರಾಥಮಿಕ ತರಬೇತಿಗೆ ನಿಯೋಜಿಸಲಾಗಿತ್ತು. ಆದರೆ ತರಬೇತಿಗೆ ಹಾಜರಾಗದೆ ವಿಧಿಶಾದಲ್ಲಿರುವ ತನ್ನ ಗ್ರಾಮಕ್ಕೆ ಹಿಂದಿರುಗಿದ್ದ. ಸಂವಹನ ಮತ್ತು ಇಲಾಖೆಯ ಮೇಲ್ವಿಚಾರಣೆ ಕೊರತೆಯಿಂದಾಗಿ ಆತ ಕೆಲಸಕ್ಕೆ ಹಾಜರಾಗದಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ.

ಆದರೆ ಆತನ ಬ್ಯಾಂಕ್ ಖಾತೆಗೆ ಸಂಬಳ ಜಮೆಯಾಗುತ್ತಿತ್ತು. 2023ರಲ್ಲಿ ಸಂಬಳ ಪರಿಷ್ಕರಣೆ ವೇಳೆ ಪರಿಶೀಲಿಸಿದಾಗ ಆತ ಕೆಲಸಕ್ಕೆ ಗೈರಾಗಿರುವುದು ತಿಳಿಯಿತು. ಆಗ ತಾನು ಮನೋರೋಗದ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ತಿಳಿಸಿದ್ದ. ಹೀಗಾಗಿ ಆತನನ್ನು ನೆಹರು ನಗರ ಪೊಲೀಸ್ ಲೇನ್​ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಆತ ಕರ್ತವ್ಯಕ್ಕೆ ಗೈರಾಗಿರುವುದು ಕಂಡು ಬಂದಿದ್ದರಿಂದ ಕೆಲಸದಿಂದ ವಜಾ ಮಾಡಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥ ಕಾನ್ಸ್​ಟೇಬಲ್ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಶ್ರದ್ಧಾ ತಿವಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net