ಒಬ್ಬರಿಗೊಬ್ಬರು ಭಿನ್ನವಾದರು ನಮ್ಮಿಬ್ಬರ ಸಂಬಂಧ ಆಸಕ್ತಿದಾಯಕವಾಗಿದೆ; ಖ್ಯಾತ ನಟಿಯ ಹೇಳಿಕೆ ವೈರಲ್​

Tabu
Published on

ಮುಂಬೈ: ತಮ್ಮ ಅಭಿನಯ, ವಿಭಿನ್ನ ಮ್ಯಾನರಿಸಂ ಮೂಲಕ ಬಾಲಿವುಡ್​ ಸೇರಿದಂತೆ ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸಿರುವ ನಟಿ ಟಬು ಈಗಲೂ ಬಹುಬೇಡಿಕೆಯ ನಟಿ ಎನ್ನಿಸಿಕೊಂಡಿದ್ದಾರೆ. ಅವರಿಗೆ ಈಗಾಗಲೇ 52 ವರ್ಷಗಳಾಗಿದ್ದು, ಈಗಳು ಕೂಡ ಸಕತ್ ಫಿಟ್ ಮತ್ತು ಬ್ಯೂಟಿಫುಲ್ ಆಗಿದ್ದಾರೆ. 52 ವರ್ಷಗಳಾದರೂ ಈ ನಟಿ ಇನ್ನೂ ಸಿಂಗಲ್​ ಆಗಿದ್ದು, ಅವರ ಹೆಸರು ಆಗಿಂದಾಗೆ ಖ್ಯಾತ ನಟರ ಜೊತೆ ಕೇಳಿ ಬರುತ್ತಿರುತ್ತವೆ.

1980ರಲ್ಲಿ ಬಾಲಿವುಡ್​ ಪ್ರವೇಶಿಸಿದ ಟಬು ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆ ಬಳಿಕ ಬೋನಿ ಕಪೂರ್ ನಿರ್ಮಾಣದ ಪ್ರೇಮ್ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಆದರೆ, ಈ ಚಿತ್ರ ತೆರೆಗೆ ಬರಲು ಬಹಳ ಸಮಯ ಹಿಡಿಯಿತು. ಚಿತ್ರದಲ್ಲಿ ಸಂಜಯ್ ಕಪೂರ್ ಅವರ ಜೊತೆ ಟಬು ನಟಿಸಿದ್ದರು. ಆರಂಭದಲ್ಲಿ ಸಂಜಯ್​ ಕಪೂರ್​ ಜೊತೆ ಹೆಸರು ಕೇಳಿ ಬಂದಿತಾದರು ನಟಿ ಈ ಸುದ್ದಿಯನ್ನು ಅಲ್ಲಗೆಳೆದಿದ್ದರು. ವೈಯಕ್ತಿಕ ಜೀವನದ ಹೊರತಾಗಿ, ಟಬು ನಿಧಾನವಾಗಿ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸುತ್ತಿದ್ದರು. ಅವರು ಕಾಲಾಪಾನಿ, ಮಾಚಿಸ್, ಚಾಂದಿನಿ ಬಾರ್, ಮಕ್ಬೂಲ್​​ನಂತಹ ಚಿತ್ರಗಳನ್ನು ಒಳಗೊಂಡಂತೆ ವಿಭಿನ್ನ ಪ್ರಕಾರಗಳ ಸಿನಿಮಾ ಮಾಡುವ ಮೂಲಕ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

Tabu Devgn

ದಿನ ಕಳೆದಂತೆ ಟಬು ಅವರ ಹೆಸರು  ನಿರ್ದೇಶಕ ಸಾಜಿದ್ ನಾಡಿಯಾಡ್ವಾಲಾ ಅವರೊಂದಿಗೆ ಕೇಳಿ ಬಂತು. ಆದರೆ ಟಬು ಅವರ ಈ ಸಂಬಂಧ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಸಾಜಿದ್ ನಂತರ ಸೌತ್ ಸ್ಟಾರ್ ನಾಗಾರ್ಜುನ ಜೊತೆ ಟಬು ಅವರ ಆಪ್ತತೆಯ ಬಗ್ಗೆ ಮಾತು ಕೇಳಿ ಬಂದಿತ್ತು. ವರದಿಗಳ ಪ್ರಕಾರ, ಇಬ್ಬರೂ 10 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಆದರೆ ನಾಗಾರ್ಜುನ ವಿವಾಹವಾದಾಗಿನಿಂದ, ಈ ಸಂಬಂಧವು ಮುರಿದು ಹೋಯಿತು. ಆ ಬಳಿಕ ಅಜಯ್​ ದೇವಗನ್​ ಜೊತೆ ಹೆಸರು ಕೇಳಿ ಬಂದಿತರಾದರು ನಾನು ಹಾಗೂ ಆತ ಉತ್ತಮ ಸ್ನೇಹಿತರು ಎಂದು ಹೇಳುವ ಟಬು ವದಂತಿಗೆ ತೆರೆ ಎಳೆದಿದ್ದರು.

ಇದೀಗ ತಮ್ಮ ಹಾಗೂ ಅಜಯ್​ ಫ್ರೆಂಡ್​ಶಿಪ್​ ಕುರಿತು ಮಾತನಾಡಿರುವ ಟಬು ಕೆಲಸದ ಸಮಯದಲ್ಲಿ ನನ್ನಿಂದ ನಿರ್ಮಾಪಕರಿಗೆ ಏನಾದರೂ ತೊಂದರೆಯಾದರೆ ಅವರು ಅಜಯ್​ಗೆ ಕರೆ ಮಾಡಿ ಕರೆಸಿಕೊಳ್ಳುತ್ತಾರೆ. ಆತ ನನ್ನ ನಿರ್ಧಾರಕ್ಕೆ ಯಾವತ್ತೂ ಅಡ್ಡಿ ಬಂದಿಲ್ಲ. ಅದಕ್ಕಾಗಿ ನಾನು ಆತನನ್ನು ಗೌರವಿಸುತ್ತೇನೆ. ನನ್ನ ಹಾಗೂ ಅವನ ನಡುವಿನ ಸಂಬಂಧ ಅತ್ಯಂತ ಆಸಕ್ತಿದಾಯಕವಾಗಿದ್ದು, ನಾವು ಒಬ್ಬರಿಗೊಬ್ಬರು ಸಂಪೂರ್ಣವಾಗಿ ಭಿನ್ನವಾಗಿದ್ದೇವೆ ಎಂದು ನಟಿ ಟಬು ಹೇಳಿದ್ದಾರೆ. ಈ ವಿಡಿಯೋ ಬಾಲಿವುಡ್​ ಅಂಗಳದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net