

ಭೋಪಾಲ್: ತಿಂದಿರುವ ಊಟ ಹೊಟ್ಟೆಯಲ್ಲಿ ಅರಗಿದ ಮೇಲೆ ಏನಾಗಬೇಕು? ಶೌಚವಾಗಿ ದೇಹದಿಂದ ಹೊರಹೋಗಲೇ ಬೇಕು. ಹಾಗೊಂದು ವೇಳೆ ಹೋಗದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗಿಬಿಡುತ್ತಾನೆ. ಆದರೆ ಇಲ್ಲೊಬ್ಬ ಹುಡುಗ ಬರೋಬ್ಬರಿ 18 ತಿಂಗಳಿನಿಂದ ಶೌಚಕ್ಕೆ ಹೋಗೇ ಇಲ್ಲವಂತೆ. ಏನಿರಬಹುದು ಇದರ ರಹಸ್ಯವೆಂದು ತಿಳಿಯಲು ಮುಂದೆ ಓದಿ.
ಮಧ್ಯಪ್ರದೇಶದ ಮೊರನಾ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿನ ಬಡ ಕುಟುಂಬದಲ್ಲಿ ಜನಿಸಿರುವ ಅನೀಶ್ ಛಾಂಡಿಲ್ ಈ ವಿಸ್ಮಯಕಾರಿ ಬಾಲಕ. ಈತನಿಗೀಗ 16 ವರ್ಷ ವಯಸ್ಸು. ಪ್ರತಿ ದಿನ 18ರಿಂದ 20 ರೊಟ್ಟಿ ತಿನ್ನುತ್ತಾನಂತೆ. ಆದರೆ ಕಳೆದ 18 ತಿಂಗಳಿನಿಂದ ಈತ ಶೌಚಕ್ಕೆ ಹೋಗೇ ಇಲ್ಲ. ಹಾಗಿದ್ದರೂ ಈತನಿಗೆ ಏನೂ ಸಮಸ್ಯೆಯಾಗಿಲ್ಲವಂತೆ. 18 ತಿಂಗಳ ಮೊದಲು ಯಾವ ರೀತಿಯಲ್ಲಿದ್ದನೋ ಈಗಲೂ ಕೂಡ ಅದೇ ರೀತಿಯಲ್ಲಿದ್ದಾನಂತೆ.
ಇದೊಂದು ವಿಚಿತ್ರ ಕಾಯಿಲೆ ಎನ್ನುತ್ತಾರೆ ವೈದ್ಯಕೀಯ ವಲಯದವರು. ಆದರೆ ಈ ಕಾಯಿಲೆ ಹೆಸರೇನು? ಗುಣ ಪಡಿಸುವುದೇಗೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಹತ್ತಾರು ವೈದ್ಯರಿಗೆ ತೋರಿಸಿದರೂ ಯಾರೊಬ್ಬರೂ ಅನೀಶ್ಗೆ ಚಿಕಿತ್ಸೆ ಕೊಡಲು ಸಾಧ್ಯವಾಗಿಲ್ಲವಂತೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ ಎನ್ನುತ್ತಾರೆ ಹಲವರು.
ಶೌಚಕ್ಕೇ ಹೋಗದ ಬಾಲಕ ಪ್ರತಿ ದಿನ ಊಟ ಮಾಡುವ ಆಹಾರ ಎಲ್ಲಿಗೆ ಹೋಗುತ್ತದೆ? ಏನಾಗುತ್ತದೆ ಎನ್ನುವುದು ಇಂದಿಗೂ ತಿಳಿಯದ ವಿಚಾರ. (ಏಜೆನ್ಸೀಸ್)