

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲೂ ಹಾವಿನ ವಿಡಿಯೋಗಳು ಅಂದರೆ ನೋಡುಗರನ್ನು ಬಹುಬೇಗ ಸೆಳೆದುಬಿಡುತ್ತವೆ ಮತ್ತು ಕ್ಷಣಾರ್ಧದಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆ. ಇದೀಗ ಅಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.
ಹಾವು ಎಂದಾಕ್ಷಣ ಮಾರುದ್ದ ಓಡುತ್ತೇವೆ. ಈ ಪದ ಕೇಳಿದರೆ ಸಾಕು ಎಲ್ಲಿಲ್ಲದ ಭಯ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಹಾವಿಗೆ ಸ್ನಾನ ಮಾಡಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಹಾವಿಗೆ ಸ್ನಾನ ಮಾಡಿಸೋದು ಅಂದ್ರೆ ಸುಮ್ನೇನಾ? ಇದನ್ನು ನಂಬೋಕೆ ಸಾಧ್ಯಾನಾ? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಆದರೆ, ಈ ವಿಡಿಯೋ ನೋಡಿದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸ್ನಾನದ ಕೋಣೆಯಲ್ಲಿ ಜಗತ್ತಿನ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾದ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ್ದಾನೆ. ಅದೂ ಕೂಡ ಸೋಪು ಹಾಕಿ. ಜಗ್ ತೆಗೆದುಕೊಂಡು ಸಾಕಷ್ಟು ಬಾರಿ ಹಾವಿನ ಮೇಲೆ ನೀರು ಸುರಿಯುತ್ತಾನೆ. ಇದರಿಂದ ಹಾವಿಗೆ ಏನಾಯಿತೋ ಏನೋ? ಒಂದು ಬಾರಿ ಜಗ್ ಅನ್ನೇ ಬಾಯಿಯಿಂದ ಕಚ್ಚಿಕೊಳ್ಳುತ್ತದೆ. ಬಳಿಕ ಹಾವಿನಿಂದ ಜಗ್ ಬಿಡಿಸಿಕೊಳ್ಳುವ ವ್ಯಕ್ತಿ ಮತ್ತೆ ನೀರು ಹಾಕಿ ಸ್ನಾನ ಮಾಡಿಸುತ್ತಾನೆ. ಈ ವೇಳೆ ಒಮ್ಮೆಯು ಸ್ನಾನ ಮಾಡಿಸುವ ವ್ಯಕ್ತಿಯ ಮೇಲೆ ಹಾವು ದಾಳಿ ಮಾಡುವುದೇ ಇಲ್ಲ!
ಇನ್ನು ಈ ವಿಡಿಯೋವನ್ನು sakhtlogg ಹೆಸರಿನ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾವಿರಾರು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋಗೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಯಾಕೆ ಬದುಕುತ್ತಾರೆ ಎಂಬುದಕ್ಕೆ ಇದೇ ಕಾರಣ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ. ಅದದರ್ಥ ಪುರುಷರು ಅಪಾಯಕಾರಿ ಸಾಹಸಗಳನ್ನು ಮಾಡುವುದರಿಂದ ಅವರು ಹೆಚ್ಚು ಕಾಲ ಬದುಕುಳಿಯುದಿಲ್ಲ ಎಂದು.
ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸುವುದನ್ನು ಮರೆಯಬೇಡಿ. (ಏಜೆನ್ಸೀಸ್)