ಪಾಳುಬಿದ್ದ ಮನೆ ತೆರವಿಗೆ ಸ್ಥಳೀಯರ ಆಗ್ರಹ

14 smg 6
Published on

ಶಿವಮೊಗ್ಗ: ಆಹಮ್ಮದ್‌ನಗರದ 3ನೇ ಕ್ರಾಸ್‌ನಲ್ಲಿ 40 ವರ್ಷಗಳಿಂದ ಪಾಳುಬಿದ್ದ ಮನೆಯಿಂದ ಕಿರಿಕಿರಿ ಉಂಟಾಗುತಿದ್ದು ತಕ್ಷಣವೇ ಪಾಳುಬಿದ್ದ ಮನೆಯನ್ನು ಪಾಲಿಕೆಯಿಂದ ತೆರವುಗೊಳಿಸುವಂತೆ ಒತ್ತಾಯಿಸಿ ಎಚ್‌ಡಿಕೆ ಮಲ್ನಾಡ್ ಬ್ರಿಗೇಡ್ ನೇತೃತ್ವದಲ್ಲಿ ಸ್ಥಳೀಯರು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರಿಗೆ ಮನವಿ ಸಲ್ಲಿಸಿದರು.

ಪಾಳುಬಿದ್ದ ಮನೆ ಸುತ್ತ ದೊಡ್ಡ ಆಲದ ಮರ ಬೆಳೆದಿದ್ದು ಅದರ ಬೇರುಗಳಿಂದ ಹತ್ತಿರದ ನಿವಾಸಿಗಳ ವಾಸದ ಕಟ್ಟಡಕ್ಕೆ ಹಾನಿಯಾಗುತ್ತಿದೆ. ಜತೆಗೆ ಕಸದ ಗುಂಡಿಯಂತಾಗಿದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಈ ಕುರಿತಂತೆ ಮಾಲೀಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಬ್ರಿಗೇಡ್ ಎನ್.ಸಿಬ್ಬತ್ ಉಲ್ಲಾ, ಅನಿಲ್ ಕುಮಾರ್, ನಾಸೀರ್, ಪರಮೇಶ್ವರ್, ಮುಸಾವೀರ್, ಸಾಧಿಕ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net