ಸಂಸದರು ಟೇಪ್ ಕತ್ತರಿಸೋಕೆ ಸೀಮಿತ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ

12-10-rama-bheema
Published on

ರಾಮನಗರ: ಚನ್ನಪಟ್ಟಣ ಮತ್ತು ರಾಮನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನವರಿಂದ ಹೇಳಿಸಿಕೊಳ್ಳಬೇಕಿಲ್ಲ. ಸಂಸದ ಸುರೇಶ್ ಕೇವಲ ಟೇಪ್ ಕತ್ತರಿಸಲು ಇದ್ದಾರೆಯೇ ಎಂದು

ಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ರಾಯರದೊಡ್ಡಿ ವೃತ್ತದಲ್ಲಿ ಭೀಮಪುತ್ರಿ ಬ್ರಿಗೇಡ್‌ನ ಭೀಮಪುತ್ರಿ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಆಕಾಡೆಮಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್‌ನವರು ಏನು ವಾಡುತ್ತಿದ್ದಾರೆ, ಕುಮಾರಸ್ವಾಮಿ ಬಗ್ಗೆ ಮಾತನಾಡುವ ಕಾಂಗ್ರೆಸ್ ಎಂಪಿ ಎಲ್ಲಿದ್ದಾರೆ, ಬರಿ ಟೇಪ್ ಕಟ್ ವಾಡುತ್ತಾರೆ, ಕೆಲಸ ಏನು ಮಾಡುತ್ತಿದ್ದಾರೆ.

ನಾನು ಎಲ್ಲೇ ಇದ್ದರು ರಾಮನಗರ, ಚನ್ನಪಟ್ಟಣದ ವಾಹಿತಿ ಪಡೆಯುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಳ್ಳಬೇಕಿಲ್ಲ. ಎರಡೂ ಕ್ಷೇತ್ರಗಳ ಅಭಿವೃದ್ಧಿಗೆ ಕಾಂಗ್ರೆಸ್‌ನವರ ಕೊಡುಗೆ ಏನು? ಐದು ವರ್ಷ ಕಾಂಗ್ರೆಸ್ ಸರ್ಕಾರವಿತ್ತು. ಉಸ್ತುವಾರಿ ಸಚಿವರು, ಎಂಪಿ ಇದ್ದರೂ ಏಕೆ ಅಭಿವೃದ್ಧಿ ವಾಡಲಿಲ್ಲ ಎಂದು ಪ್ರಶ್ನಿಸಿದ ಎಚ್‌ಡಿಕೆ, ಡಿ.ಕೆ. ಸಹೋದರರ ಕಾಂಗ್ರೆಸ್‌ನವರಿಗೆ ಬೇರೆ ಏನು ಬಂಡವಾಳವಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಇರುವ ಭಯ ಎಂದರೆ, ಜನರ ಜತೆ ಕುವಾರಸ್ವಾಮಿಗೆ ಇರುವ ಸಂಪರ್ಕ. ಇದು ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನನ್ನ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಎಂಎಲ್‌ಸಿ ರಮೇಶ್‌ಗೌಡ, ಮುಖಂಡರಾದ ರೇವತಿ ರಾಜ್, ಅಜಿತ್, ಭೀಮಪುತ್ರಿ ಕಲ್ಚರಲ್‌ಮತ್ತು ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ದಿವಿಲ್ ಕುವಾರ್, ಜಿಲ್ಲಾಧ್ಯಕ್ಷ ವಿಜಯ್‌ಗೌಡ, ಪದಾಧಿಕಾರಿಗಳಾದ ರುನಂದನ್, ಗೂಳಿಗೌಡ ಮತ್ತಿತರರು ಇದ್ದರು.

ರಾಜಕೀಯ ಪ್ರೇರಿತ ದಾಳಿ :  ಐಟಿ ರೇಡ್ ಎಲ್ಲರಿಗೂ ಗೊತ್ತಿರುವ ವಿಚಾರ. ನಾನು ಮೊದಲೇ ಹೇಳಿದ್ದೇ ಇದು ರಾಜಕೀಯಪ್ರೇರಿತ ದಾಳಿ. ಯಡಿಯೂರಪ್ಪನವರನ್ನು ನಿಯಂತ್ರಿಸಲು ವಾಡಿರುವ ದಾಳಿ. ಕಾಂಗ್ರೆಸ್‌ನಿಂದ ಓಡಿಸಿ, ಬೀದಿಯಲ್ಲಿ ಇದ್ದವರನ್ನು ಕರೆದುಕೊಂಡು ಬಂದು ಶಾಸಕರನ್ನಾಗಿ ವಾಡಿದ ವ್ಯಕ್ತಿಯ ಹೇಳಿಕೆಯನ್ನು ಗಮನಿಸಿದ್ದೇನೆ. ಯಡಿಯೂರಪ್ಪ ಆಪ್ತರ ಮೇಲಿನ ಐಟಿ ದಾಳಿಗೆ ಕಾಂಗ್ರೆಸ್‌ನ ಮೂಲ ನಾಯಕರೇ ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಡಿಕೆಶಿಗೆ ಟಾಂಗ್ :  ಮುಂದಿನ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವುದೇ ಟಾರ್ಗೆಟ್ ಆಗಿದ್ದು, ಇದಕ್ಕಾಗಿ ಎಂತಹುದೇ ಚಿತಾವಣೆಯನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು. ಅ.16ರಿಂದ ಉಪಚುನಾವಣೆ ನಡೆಯುವ ಎರಡು ಕ್ಷೇತ್ರಗಳಲ್ಲಿ ಪ್ರಚಾರ ವಾಡುತ್ತೇನೆ. ನಾವು ಮಂತ್ರಿ ವಾಡಿದ, ನಮ್ಮ ಪಕ್ಷದಲ್ಲೇ ಇದ್ದಂತಹ ವ್ಯಕ್ತಿಯ ಕುಟುಂಬದಿಂದ ಹೈಜಾಕ್ ವಾಡಿ ಕರೆದುಕೊಂಡು ಚುನಾವಣೆ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಮಧ್ಯರಾತ್ರಿಯಲ್ಲಿ ಬಲೆ ಬೀಸುತ್ತೇನೆ ಎಂದು ಹೇಳಿದ್ದಾರೆ. ಪ್ರತಿದಿನ ಜೆಡಿಎಸ್ ನಾಯಕರ ಮನೆಯ ಮುಂದೆ ಬಲೆ ಹಾಕಿ ಕೂತಿರುತ್ತಾರೆ. ಆದರೆ. ಅದೇ ಬಲೆ ಅವರಿಗೆ ಸುತ್ತಿಕೊಳ್ಳುತ್ತದೆ ಎಂದು ಡಿಕೆಶಿಗೆ ಟಾಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net