ಇದೇ ನೋಡಿ ನಮ್ಮ Someಕಲ್ಪ: ಉಚಿತವಾಗಿ ನಿಂಬೆ ಹಣ್ಣು ಹಂಚಬೇಕೆಂಬುದೇ ನನ್ನ ಸಂಕಲ್ಪ

Revanna 1 jan 20
Published on

ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.

ರೇವಣ್ಣ

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಬೀಳುವುದಕ್ಕೆ ನಾನೇ ಕಾರಣ ಎಂಬ ಆಪಾದನೆಯಿಂದ ನಿಮ್ಮ ರೇವಣ್ಣ ಈಗ ನೋವಣ್ಣ ಆಗವ್ನೆ. ಆದರೆ ನಿಜವಾದ ಕಾರಣ ಅದಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ನನ್ನ ಹಾಗೆ ಮಂತ್ರಿಸಿದ ನಿಂಬೆಹಣ್ಣು ವ್ಯಾಪಕವಾಗಿ ಬಳಸದೇ ಇದ್ದದ್ದರಿಂದ ಕುಮಾರನ ಸರ್ಕಾರ ಢಮಾರ್ ಆಯ್ತು. ಈ ವರ್ಷ ಹಾಸನದಲ್ಲಿ 50 ಎಕ್ರೆ ನೀರಾವರಿ ಜಮೀನಿನಲ್ಲಿ ನಿಂಬೆ ಗಿಡ ಬೆಳೆಸಿ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಉಚಿತವಾಗಿ ನಿಂಬೆ ಹಣ್ಣು ಹಂಚಬೇಕೆಂಬುದೇ ನನ್ನ ಸಂಕಲ್ಪ. ಇದರಿಂದ ರಿವರ್ಸ್ ಆಪರೇಷನ್ ಆಗಿ ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅಂತ ಜ್ಯೋತಿಷಿಗಳು ಹೇಳವ್ರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net