'ಹೌದ್ರೀ.. ನಾನು ರಮೇಶ್​ ಜಾರಕಿಹೊಳಿಗೆ ಧೈರ್ಯ ಹೇಳಿದ್ದು ನಿಜ.. ರಾಜಕಾರಣಿಗಳಿಗೆ ಮನುಷ್ಯತ್ವ ಇರಬೇಕ್ರೀ'

revanna
Published on

ಹಾಸನ: ಪ್ರಕರಣವೊಂದರಲ್ಲಿ ಸಿಲುಕಿಕೊಂಡಿರುವ ರಮೇಶ್​ ಜಾರಕಿಹೊಳಿ ಅವರಿಗೆ ಧೈರ್ಯ ನೀಡಿರುವ ವಿಚಾರದಲ್ಲಿ ಮಾಜಿ ಸಚಿವ, ಜೆಡಿಎಸ್​ ನಾಯಕ ಎಚ್​.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ.

ಹೌದ್ರೀ.. ನಾನು ರಮೇಶ್​ ಜಾರಕಿಹೊಳಿಗೆ ಧೈರ್ಯ ಹೇಳಿದ್ದು ನಿಜ. ಅವರು ಸಮಾಜದಲ್ಲಿ ಕಷ್ಟಪಟ್ಟು ಬಂದವರು. ನಮಗೆ ಮನುಷ್ಯತ್ವ ಇರಬೇಕು. ಒಳ್ಳೆದು ಕೆಟ್ಟುದ್ದ ದೇವರಿಗೆ ಬಿಟ್ಟಿದ್ದು. ನಾನು ಅವರಿಗೆ ಧೈರ್ಯ ಹೇಳಿದ್ದು ನಿಜ ಎಂದು ಅವರು ಹೇಳಿದ್ದಾರೆ.

ಇಲ್ಲಿ ಪಕ್ಷ ಮುಖ್ಯವಾಗುವುದಿಲ್ಲ, ವ್ಯಕ್ತಿ ಮುಖ್ಯನಾಗುತ್ತಾನೆ. ರಾಜಕೀಯವೇ ಬೇರೆ. ಇಲ್ಲಿ ರಾಜಕೀಯ ಮಾಡಬಾರದು. ಅದಕ್ಕಾಗಿಯೇ ನಾವು ಅವರಿಗೆ, ಹೆದರ ಬೇಡ ನಿಮ್ಮ ಜತೆ ನಾವಿದ್ದೇವೆ ಅಂತ ಧೈರ್ಯ ಹೇಳಿದ್ದೇವೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net