ದೇವೇಗೌಡ, ಕುಮಾರಸ್ವಾಮಿ ಶಕ್ತಿ ಇಮ್ಮಡಿ

srl vijyostava
ಶಿರಾಳಕೊಪ್ಪದಲ್ಲಿ ಬಿಜೆಪಿ ಕಾರ್ಯಕತರ್ರು ಸಂಭ್ರಮಾಚರಣೆ ಮಾಡಿದರು. ಶಿವಾನಂದ, ಎಚ್.ಎಂ.ಚಂದ್ರಶೇಖರ, ರವಿ ಶಾನಭೋಗ, ರಾಘವೇಂದ್ರ, ಅಗಡಿ ಆದಿತ್ಯ, ಚಂದ್ರಶೇಖರ ಮಂಚಾಲಿ ಇತರರಿದ್ದರು.
Published on

ಶಿರಾಳಕೊಪ್ಪ: ಸಂಸದ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕತರ್ರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ನಗರ ಬಿಜೆಪಿ ಅಧ್ಯಕ್ಷ ಚನ್ನವೀರ ಶೆಟ್ಟಿ ಮಾತನಾಡಿ, ರಾಘಣ್ಣನ ಗೆಲುವು ನಮಗೆ ಅತ್ಯಂತ ಸಂತಸ ಉಂಟುಮಾಡಿದೆ. ಗೆಲುವಿಗೆ ಸಹಕರಿಸಿದ ಎಲ್ಲ ಕಾರ್ಯಕತರ್ರು, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಈರ್ಯಾನಾಯಕ್ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿಯ ಎನ್‌ಡಿಎ ಮೈತ್ರಿ ಯಶಸ್ವಿಯಾಗಿ ಜಯಗಳಿಸಿದೆ. ಕರ್ನಾಟಕದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಶಕ್ತಿ ಇಮ್ಮಡಿ ಆಗಿದೆ. ಕುಮಾರಸ್ವಾಮಿ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಹಾಗೆಯೇ ಡಾ. ಮಂಜುನಾಥ ಚುನಾವಣೆಯಲ್ಲಿ ಗೆದ್ದು ಡಿ.ಕೆ.ಸುರೇಶ್ ಅವರನ್ನು ಸೋಲಿಸಿ ಕಾಂಗ್ರೆಸ್‌ಗೆ ಮುಖಭಂಗ ಮಾಡಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಮಂಚಿ ಶಿವಾನಂದ, ಎಚ್.ಎಂ.ಚಂದ್ರಶೇಖರ, ರವಿ ಶಾನಭೋಗ, ರಾಘವೇಂದ್ರ, ಯುವ ಮೋರ್ಚಾ ಅಧ್ಯಕ್ಷ ಅಗಡಿ ಆದಿತ್ಯ, ಚಂದ್ರಶೇಖರ ಮಂಚಾಲಿ, ದಿವಾಕರ್ ಮೇಸ್ಟ್ರು, ಶಿವಪುತ್ರ, ಮಂಜು ನಾಯಕ್, ಶೋಭಾ ದಿವಾಕರ್, ಪುಷ್ಪಾ, ರಂಜನಾ, ರಾಜೇಶ್ವರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net