ಇದೇ ನೋಡಿ ನಮ್ಮ Someಕಲ್ಪ: ಮಾಜಿ ಸಿಎಂ ಎಚ್​ಡಿಕೆ ಸಂಕಲ್ಪ ಏನಿರಬಹುದು?

HDK 1 jan 20
Published on

ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.

ಕುಮಾರಸ್ವಾಮಿ

ಸಂಕ+ಅಲ್ಪ=ಸಂಕಲ್ಪ. ಸಂಕಲ್ಪ ಅನ್ನುವ ಶಬ್ದದಲ್ಲಿ ಅಲ್ಪ ಇದೆ. ಆದ್ದರಿಂದ ಸಂಖ್ಯೆಯಲ್ಲಿ ನಾವು ಅಲ್ಪರಾಗಿದ್ದರೂ ಪುನಃ ಮುಖ್ಯಮಂತ್ರಿ ಆಗುವ ಯೋಗ ಬರಬಹುದು. ಕಳೆದ ಚುನಾವಣೆಯಲ್ಲಿ ನಾನು ಸುರಿಸಿದ ಕಣ್ಣೀರಿನ ಪ್ರಮಾಣ ಕಡಿಮೆಯಾದದ್ದೇ ನಮ್ಮ ಸೋಲಿಗೆ ಕಾರಣ ಅಂತ ತಿಳಿದು ಬಂದಿದೆ. ಈ ವರ್ಷ ವಿದೇಶದಲ್ಲಿರುವ ಅತ್ಯುತ್ತಮ ನೇತ್ರವೈದ್ಯರ ಹತ್ತಿರ ಇನ್ನೂ ಹೆಚ್ಚು ಕಣ್ಣೀರು ಬರುವಂತೆ ಚಿಕಿತ್ಸೆ ಪಡೆದುಕೊಳ್ಳುತ್ತೇನೆ. ಈ ಕುಮಾರ ಸ್ವಾಮಿಗೆ ಎರಡು ಸಲ ಸಿಎಂ ಆಗುವ ಅದೃಷ್ಟ ಕೂಡಿ ಬಂತು. ಆದರೆ ಕುಮಾರನ ಕುಮಾರ ನಿಖಿಲ್ ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ವಿಫಲನಾದ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ವರ್ಷ ಯಾವುದಾದರೂ ಒಂದು ಕ್ಷೇತ್ರದಲ್ಲಿಯಾದರೂ ಅವನನ್ನು ಯಶಸ್ವಿ ಮಾಡಬೇಕೆಂಬುದೇ ನನ್ನ ಸಂಕಲ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net