

ನವದೆಹಲಿ: ಕರೊನಾಕ್ಕೆಂದೇ ಸದ್ಯ ಯಾವುದೇ ಔಷಧಿ ತಯಾರಾಗಿಲ್ಲ. ಹೀಗಾಗಿ ಸದ್ಯ ಕೊವಿಡ್-19 ಸೋಂಕಿತರಿಗೆ ಮಲೇರಿಯಾ ನಿಯಂತ್ರಣ ಮಾಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹೈಡ್ರಾಕ್ಸಿಕ್ಲೋರೋಕ್ವಿನ್ನಿಂದ್ ಸೈಡ್ ಎಫೆಕ್ಟ್ಗಳು ತುಂಬ ಆಗುತ್ತಿವೆ ಎಂದು ಅಲ್ಲಲ್ಲಿ ಕೆಲವರು ಹೇಳಿದ್ದರು. ಆದರೆ ಈಗ ಇಂಗ್ಲೆಂಡ್ನ ವೈದ್ಯಕೀಯ ಜರ್ನಲ್ ಲಾನ್ಸೆಂಟ್ ವರದಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ, ಕ್ಲೋರೊಕ್ವಿನ್ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸುತ್ತಿರುವ ಕೊವಿಡ್-19 ಸೋಂಕಿತರು ಇರುವ ಆಸ್ಪತ್ರೆಗಳಲ್ಲಿ ಮರಣದ ದರ ಮತ್ತು ಹೃದಯ ಬಡಿತದಲ್ಲಿ ಏರುಪೇರು ಉಂಟಾಗುವ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ನು ಕ್ಲಿನಿಕಲ್ ಟೆಸ್ಟ್ ಮಾಡಬೇಕು. ಅಲ್ಲಿಯವರೆಗೂ ಸೋಂಕಿತರಿಗೆ ಇದರಿಂದ ಚಿಕಿತ್ಸೆ ನೀಡಬಾರದು. ಕೊವಿಡ್-19ರ ವಿರುದ್ಧ ಈ ಔಷಧಿ ಹೇಗೆ ಹೋರಾಡುತ್ತದೆ ಎಂಬುದನ್ನು ತುರ್ತಾಗಿ ದೃಢೀಕರಣ ಮಾಡಿಕೊಳ್ಳಬೇಕು. ಅದಕ್ಕಾಗಿ ಯಾದೃಚ್ಛೀಕರಣವಾದ ಕ್ಲಿನಿಕಲ್ ಟೆಸ್ಟ್ ಅಗತ್ಯವಿದೆ ಎಂದು ಅಧ್ಯಯನವನ್ನು ಬರೆದ ಲೇಖಕರು ತಿಳಿಸಿದ್ದಾರೆ.
ಲಾನ್ಸೆಂಟ್ನಲ್ಲಿ ಪ್ರಕಟವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ವರದಿಗೆ ಸಂಬಂಧಪಟ್ಟಂತೆ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜುರಿಚ್ನಲ್ಲಿರುವ ಯೂನಿವರ್ಸಿಟಿ ಹಾಸ್ಪಿಟಲ್ನ ಹಾರ್ಟ್ ಸೆಂಟರ್ ನಿರ್ದೇಶಕರಾದ ಡಾ. ಫ್ರಾಂಕ್ ರುಸ್ಚಿಟ್ಜ್ಕಾಅವರು ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿದ್ದಾರೆ. ಕ್ಲೋರೊಕ್ವಿನ್ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಕೊವಿಡ್-19 ರೋಗಿಗಳಿಗೆ ಯಾವುದೇ ಪ್ರಯೋಜನವೂ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾಮಾರಿ ಕರೊನಾ ವ್ಯಾಪಕತೆಗೆ ನಲುಗಿದ ಸ್ಪೇನ್
ನಾವು ಆಳವಾಗಿ ಅಧ್ಯಯನ ಮಾಡಿದ್ದೇವೆ. ಮಲೇರಿಯಾಕ್ಕೆ ಚಿಕಿತ್ಸೆ ನೀಡಲು ಬಳಸುವ ಕ್ಲೋರೊಕ್ವಿನ್ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್ನಿಂದ ಕೊವಿಡ್-19 ರೋಗಿಗಳಿಗೆ ತೊಂದರೆಯಾಗುತ್ತಿದೆ. ಆದರೆ ಈಗ ಎಲ್ಲ ಕಡೆ ಇದೇ ಮಾತ್ರೆಯನ್ನು ಕೊಟ್ಟು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಆತಂಕ ಉಂಟಾಗುತ್ತಿದೆ. ನಾವು ಪ್ರಪಂಚದಾದ್ಯಂತ ಹಲವು ರೋಗಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದೇವೆ. ಹಾಗಾಗಿ ಭಾರತದಲ್ಲಿ ಮತ್ತೆ ರೋಗಿಗಳಿಗೆ ಏನೂ ತೊಂದರೆಯಾಗುವುದಿಲ್ಲ ಎಂದು ಊಹಿಸುವುದು ಬೇಡ ಎಂದಿದ್ದಾರೆ.
ಈ ಮಧ್ಯೆ ಭಾರತದಲ್ಲಿ ಕೊವಿಡ್-19 ಪ್ರಸರಣ ತಡೆಗಟ್ಟಲು ಕರೊನಾ ಚಿಕಿತ್ಸೆ ನೀಡುತ್ತಿರುವ, ಸೋಂಕಿತರನ್ನು ಆರೈಕೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಲಕ್ಷಣಗಳು ಕಾಣದೆ ಇದ್ದರೂ ತೆಗೆದುಕೊಳ್ಳಲು ಅನುಮತಿ ನೀಡಬೇಕು. ಹಾಗೇ ಕಂಟೇನ್ಮೆಂಟ್ ವಲಯಗಳಲ್ಲಿ ನಿಯೋಜಿತರಾದ ಪೊಲೀಸ್, ಪ್ಯಾರಾಮಿಲಿಟರಿ ಸಿಬ್ಬಂದಿಗೂ ಎಚ್ಸಿಕ್ಯೂ ಬಳಕೆ ಮಾಡಲು ತಿಳಿಸಬೇಕು ಎಂದು ಜಂಟಿ ಮಾನಿಟರಿಂಗ್ ಗ್ರೂಪ್ ಮತ್ತು ರಾಷ್ಟ್ರೀಯ ಕಾರ್ಯಪಡೆ ಶಿಫಾರಸ್ಸು ಮಾಡಿದೆ. (ಏಜೆನ್ಸೀಸ್)
ಇದನ್ನೂ ಓದಿ: 67 ಸ್ಯಾಂಪಲ್ಸ್ ಪರೀಕ್ಷೆಗೆ