ಬಿಜೆಪಿ ಶಾಸಕನ ಪುತ್ರ, ಬೆಂಬಲಿಗರೊಂದಿಗೆ ಸೇರಿ ನನಗೆ ಹೊಡೆದಿದ್ದಾರೆ ಎಂದು ಆರೋಪ ಮಾಡಿದ ಕಂದಾಯ ಅಧಿಕಾರಿ

BJP Mla 20 Feb 20
Published on

ಬಲ್ಲಿಯಾ: ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ ಅವರ ಪುತ್ರ ಹಝಾರಿ ಸಿಂಗ್​ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

ಬಲ್ಲಿಯಾದಲ್ಲಿ ಹಝಾರಿಗೆ ಆಪ್ತರಾದವರೊಬ್ಬರ ವರ್ಗಾವಣೆಯ ವಿಷಯವನ್ನಿಟ್ಟುಕೊಂಡು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಕಂದಾಯ ಅಧಿಕಾರಿ ಆರೋಪಿಸಿದ್ದಾರೆ. ಶಾಸಕರ ಪುತ್ರ ಹಾಗೂ ಅವರ ಬೆಂಬಲಿಗರು ಹೊಡೆದಿದ್ದಾರೆ. ಬಳಿಕ ಒದ್ದು, ನೆಲದ ಮೇಲೆ ಕೆಡವಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಎಂಎಲ್​ಎ ಸುರೇಂದ್ರ ಸಿಂಗ್​ ಅವರ ಪುತ್ರ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಕಂದಾಯ ಅಧಿಕಾರಿ ನನ್ನ ಜತೆ ಅಸಭ್ಯವಾಗಿ ವರ್ತಿಸಿದ ಹಾಗೂ ನನ್ನ ಬೆಂಬಲಿಗನೋರ್ವನನ್ನು ತಳ್ಳಿದ. ಹಾಗಾಗಿ ಗಲಾಟೆಯಲ್ಲಿ ನಾನು ಮಧ್ಯಪ್ರವೇಶ ಮಾಡಿದೆ ಅಷ್ಟೇ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net