ರೈತರಿಗೆ ಪಶುಸಂಗೋಪನೆ ಬೆನ್ನೆಲುಬು; ಡಾ. ನಾಗರಾಜ

21-RNR-05
Published on

ಹಾವೇರಿ: ರೈತರಿಗೆ ಪಶುಸಂಗೋಪನೆ ಬೆನ್ನೆಲುಬಾಗಿದ್ದು, ದೇಶದ ಆಥಿರ್ಕ ಬಲವರ್ಧನೆಗೆ ಪಶು ಸಂಗೋಪನೆ ಕೃಷಿ ಜತೆಗೆ ಶೇ. 15ರಷ್ಟು ಜಿಡಿಪಿ ನೀಡುತ್ತಿದೆ. ಪಶು ವೈದ್ಯರು ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ರೈತರಿಗೆ ಹಾಗೂ ದೇಶಕ್ಕೆ ಬಹಳ ಸಹಾಯವಾಗುತ್ತದೆ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ನಾಗರಾಜ ಎಲ್​. ಹೇಳಿದರು.
ನಗರದಲ್ಲಿ ಕರ್ನಾಟಕ ಪಶುವೈದ್ಯಕಿಯ ಸಂದ ಜಿಲ್ಲಾ ಟಕದಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಪಶು ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಪಶುವೈದ್ಯರ ಸೇವೆ ಅನನ್ಯ. ನಾನೂ ಸಹ ಎರಡು ವರ್ಷ ಪಶು ವೈದ್ಯನಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದು, ನನಗೆ ಬಹಳ ತೃಪ್ತಿ ತಂದುಕೊಟ್ಟಿದೆ ಎಂದರು.
ವೆಂಕಿಸ್​ ಚಿಕನ್​ ಕಂಪನಿಯ ಡಿಜಿಎಂ ರವಿಕುಮಾರ್​ ಮಾತನಾಡಿ, ಕೋಳಿ ಸಾಕಾಣಿಕೆ ಬಹಳ ಮಹತ್ವ ಪಡೆದಿದ್ದು, ಕೋಳಿಯಿಂದ ಅನೇಕ ಉಪ ಉತ್ಪನ್ನಗಳನ್ನು ಮಾಡಬಹುದಾಗಿದೆ ಮತ್ತು ರೈತರಿಗೆ ಕೋಳಿ ಸಾಕಾಣಿಕೆ ಉತ್ತಮ ಲಾಭ ತಂದುಕೊಡುತ್ತದೆ. ಆದ್ದರಿಂದ ಕೋಳಿ ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಇಲಾಖೆಯ ಉಪ ನಿರ್ದೇಶಕ (ಆಡಳಿತ ) ಡಾ. ಎಸ್​.ವಿ. ಸಂತಿ ಮಾತನಾಡಿ, ಪಶು ವೈದ್ಯರು ಕರ್ತವ್ಯ ಮತ್ತು ಸಮಯ ಪಾಲನೆ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಕರ್ನಾಟಕ ಪಶು ವೈದ್ಯಕಿಯ ಸಂದ ಅಧ್ಯ ಡಾ. ಪರಮೇಶ ಹುಬ್ಬಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಪಶು ವೈದ್ಯರು, ಸಿಬ್ಬಂದಿಯ ಕೊರತೆಯ ನಡುವೆಯೂ ಇರುವ ವೈದ್ಯರು, ಸಿಬ್ಬಂದಿ ಕಾರ್ಯ ಅತ್ಯಂತ ಶ್ಲಾನೀಯ ಎಂದರು.
ಒತ್ತಡ ನಿರ್ವಹಣೆ ಹಾಗೂ ಮಾಹಿತಿ ಹಕ್ಕು ಅಧಿನಿಯಮ ಕುರಿತು ಉಪನ್ಯಾಸಕ ಅರವಿಂದ ಉಪನ್ಯಾಸ ನೀಡಿದರು. ಜಿಲ್ಲೆಯ ಅತ್ಯುತ್ತಮ ಪಶು ವೈದ್ಯರನ್ನಾಗಿ ಡಾ. ನೀಲಕಂಠ ಅಂಗಡಿ ಅವರನ್ನು ಆಯ್ಕೆ ಮಾಡಲಾಯಿತು.
ಪಾಲಿಕ್ಲಿನಿಕ್​ ಉಪನಿರ್ದೇಶಕ ಡಾ. ಜಯಕುಮಾರ ಕಂಕನವಾಡಿ, ಸಂದ ಆಡಳಿತ ಸದಸ್ಯರಾದ ಡಾ. ನರೇಂದ್ರ ಚೌಡಾಳ, ಡಾ. ಪವನ ಬೆಳಕೇರಿ, ಡಾ. ಯುವರಾಜ ಚೌವ್ಹಾಣ, ಅಮಿತ ಪುಟಾಣಿಕರ, ಪ್ರವಿಣ ಮರಿಗೌಡರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net