ಬದಲಾಗದ ಹಾವೇರಿ ವಿಶ್ವ ವಿದ್ಯಾಲಯದ ಬಸ್​ನ ಬೋರ್ಡ್

26-RNR-09
Published on

ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಕೆರಿಮತ್ತಿಹಳ್ಳಿಯ ವಿಶ್ವ ವಿದ್ಯಾಲಯಕ್ಕೆ ತೆರಳುವ ಬಸ್​ಗಳ ಬೋರ್ಡ್​ ಮಾತ್ರ ಬದಲಾಗದಿರುವುದು ವಿದ್ಯಾಥಿರ್ಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೆರಿಮತ್ತಿಹಳ್ಳಿಯಲ್ಲಿ ಈ ಹಿಂದೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಹಾವೇರಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಲಾಗಿತ್ತು. ನಂತರ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಮಾದರಿಯಲ್ಲಿ ಧಾರವಾಡ ಕವಿವಿಯಿಂದ ಬೇರ್ಪಡಿಸಿ ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು 2022 ಅ. 10ರಂದು ಹಾವೇರಿ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡಲಾಯಿತು.

ಆದರೆ ಈವರೆಗೂ ವಿಶ್ವವಿದ್ಯಾಲಯಕ್ಕೆ ಸಂಚಸುವ ಬಸ್​ಗಳ ಬೋರ್ಡ್​ನಲ್ಲಿ ಹಾವೇರಿ ಪಿ.ಜಿ. ಸೆಂಟರ್​ ಎಂದೇ ಬರೆಯಿಸಲಾದ ಹಳೆಯ ಬೋರ್ಡ್​ ಇದೆ. ವಿವಿ ವ್ಯಾಪ್ತಿಗೆ ರಾಣೆಬೆನ್ನೂರ, ಹಾವೇರಿ, ಹಿರೇಕೆರೂರ, ಹಾನಗಲ್ಲ, ಬ್ಯಾಡಗಿ, ಶಿಗ್ಗಾಂವಿ, ಸವಣೂರ, ರಟ್ಟಿಹಳ್ಳಿ ಸೇರಿದಂತೆ ಜಿಲ್ಲೆಯ ಸುಮಾರು 42 ಸಂಯೋಜಿತ ಪದವಿ ಕಾಲೇಜುಗಳು ಒಳಪಡುತ್ತವೆ. ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಸಾವಿರಾರು ವಿದ್ಯಾಥಿರ್ಗಳು ವಿವಿಧ ಕೆಲಸ ಕಾರ್ಯಗಳ ನಿಮಿತ್ತ ನಿತ್ಯ ಹಾವೇರಿ ವಿವಿಗೆ ಓಡಾಡುತ್ತಾರೆ.

ಸಾರಿಗೆ ಬಸ್​ಗಳು ಮಾತ್ರ ಪಿಜಿ ಸೆಂಟರ್​ ಬೋರ್ಡ್​ ಹಾಕಿಕೊಂಡು ಓಡಾಡುತ್ತಿದ್ದು, ಹಾವೇರಿ ವಿಶ್ವ ವಿದ್ಯಾಲಯ ಎಂಬುದಾಗಿ ಬದಲಾಯಿಸಿಲ್ಲ, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಬೋರ್ಡನ್ನು ಬದಲಾಯಿಸಬೇಕೆಂದು ವಿದ್ಯಾಥಿರ್ಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net