ಬೈಕ್​ ರ್ಯಾಲಿ ಮೂಲಕ ರಸ್ತೆ ಸುರಕ್ಷತೆ ಜಾಗೃತಿ

2-RNR-06
Published on

ಹಾವೇರಿ: ಇಲ್ಲಿಯ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಬೈಕ್​ ರ್ಯಾಲಿಗೆ ಡಿವೈಎಸ್ಪಿ ಎಂ.ಎಸ್​. ಪಾಟೀಲ ಚಾಲನೆ ನೀಡಿದರು.

ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಿಂದ ಆರಂಭವಾದ ಬೈಕ್​ರ್ಯಾಲಿ ನಗರದ ಮಹಷಿರ್ ವಾಲ್ಮೀಕಿ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಬಸ್​ ನಿಲ್ದಾಣ ಮುಂಭಾಗ ಸಂಚರಿಸಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಧ್ವನಿವರ್ಧಕ ಹಾಗೂ ಭಿತ್ತಿಪತ್ರಗಳ ಮೂಲಕ ಜಾಗೃತಿ ಮೂಡಿಸಿ, ಪ್ರವಾಸಿ ಮಂದಿರಕ್ಕೆ ಆಗಮಿಸಿ ಮುಕ್ತಾಗೊಂಡಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕಾಟೋಕರ, ದ್ವಿಚಕ್ರ ವಾಹನ ಮಾರಾಟಗಾರರ ಪ್ರತಿನಿಧಿಗಳು, ಚಾಲನಾ ತರಬೇತಿ ಸಿಬ್ಬಂದಿ ಹಾಗೂ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net