ಶಾಂತಿ ಸಾಮರಸ್ಯ ಹರಡುವ ಬುದ್ಧ ತತ್ವಗಳನ್ನು ಸ್ಮರಿಸಿ; ಬಸವಶಾಂತಲಿಂಗ ಸ್ವಾಮೀಜಿ

12-RNR-07
Published on

ಹಾವೇರಿ: ಬೌದ್ಧಧರ್ಮದ ಮೂರು ಪ್ರಮುಖ ತತ್ವಗಳಾದ ಜ್ಞಾನೋದಯ, ಕರುಣೆ ಮತ್ತು ಶಾಂತಿಯನ್ನು ಪರಿಗಣಿಸಲು ಬುದ್ಧ ಜಯಂತಿ ಒಂದು ದಿನ. ಈ ಐತಿಹಾಸಿಕ ಸಂದರ್ಭವು ಶಾಂತಿ ಮತ್ತು ಸಾಮರಸ್ಯವನ್ನು ಹರಡುವ ಬುದ್ಧ ತತ್ವಗಳನ್ನು ಸ್ಮರಿಸುತ್ತದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು. 
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ವತಿಯಿಂದ ಸೋಮವಾರ ನಗರದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಭಗವಾನ್​ ಬುದ್ಧ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗೌತಮ ಬುದ್ಧ, ಬುದ್ಧ ಪೂಣಿರ್ಮೆಯಂದು ಜ್ಞಾನೋದಯ ಪಡೆದನೆಂದು ನಂಬಲಾಗಿದೆ. ಬುದ್ಧನು ತನ್ನ ಜೀವನದ 45 ವರ್ಷಗಳನ್ನು ಧರ್ಮ, ಅಹಿಂಸೆ, ಸಾಮರಸ್ಯ, ಕರುಣೆ ಮತ್ತು ನಿರ್ವಾಣದ ಮಾರ್ಗವನ್ನು ಬೋಧಿಸುತ್ತಾ ಕಳೆದನು. ಅವರ ಆದರ್ಶ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ ಸಮಾರಂಭ ಉದ್ಘಾಟಿಸಿದರು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ ಭಗವಾನ್​ ಬುದ್ಧರ ಕುರಿತು ಉಪನ್ಯಾಸ ನೀಡಿದರು.
ಕೆ.ಸಿ. ಅಕ್ಷತಾ, ಅಪರ ಜಿಲ್ಲಾಧಿಕಾರಿ ಎಲ್​. ನಾಗರಾಜ, ನಗರಸಭೆಯ ಆಯುಕ್ತ ಗಂಗಾಧರ ಬೆಲ್ಲದ, ಗಾಂಧಿಪುರ ಸರ್ಕಾರಿ ಕಾಲೇಜಿನ ಉಪನ್ಯಾಸಕ ಪ್ರಕಾಶ ಬಾಕಿರ್, ಉಡಚಪ್ಪ ಮಾಳಗಿ, ಸಾಹಿತಿ ಸತೀಶ ಕುಲಕಣಿರ್, ವೀರಪ್ಪ ಗಾಳೆಮ್ಮನವರ, ಅಶೋಕ ಮರೆಣ್ಣನವರ, ಮಾಲತೇಶ ಯಲ್ಲಾಪುರ, ಶಂಭು ಕಳಸದ ಮತ್ತಿತರರು ಇದ್ದರು.
ಗುರುನಾಥ ಛಲವಾದಿ ಸಂಗಡಿಗರಿಂದ ಬುದ್ಧ ನಮನ ಜರುಗಿತು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಆರ್​.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು. ಪೃಥ್ವಿರಾಜ್​ ಬೆಟಗೇರಿ ನಿರೂಪಿಸಿದರು. ನಿಂಗಪ್ಪ ಗಾಳೆಮ್ಮನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net