ಮನುಷ್ಯನಿಗೆ ಉತ್ತಮ ಆರೋಗ್ಯ ಮುಖ್ಯ; ಜಾವಗಲ್ಲ

6-RNR-03
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.6294441, 0.4336785);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
Published on

ಹಾವೇರಿ: ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಉತ್ತಮ ಆರೋಗ್ಯ ಬೇಕಾಗುತ್ತದೆ. ಆದ್ದರಿಂದ ವಕೀಲರಿಗೆ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಸಿ.ಪಿ. ಜಾವಗಲ್ಲ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ತಮ್ಮ 25ನೇ ವರ್ಷದ ವಕೀಲರ ವೃತ್ತಿಯನ್ನು ಯಶಸ್ವಿಯಾಗಿ ಪೂರೈಸಿದ ನಿಮಿತ್ತ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕಿದೆ. ವೃತ್ತಿಯಲ್ಲಿ ಯಶಸ್ವಿಯಾಗಲು ಉತ್ತಮ ಆರೋಗ್ಯ ಕೂಡ ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಆಯುಷ್ಯ ಅಧಿಕಾರಿ ಡಾ. ಜಿ.ಸಿ. ನಿಡಗುಂದಿ ನೇತೃತ್ವದಲ್ಲಿ ಡಾ. ನಾಗರತ್ನ ಮಾಸೂರ, ಡಾ. ಶಿವಕುಮಾರ ಸುಣಗಾರ, ಡಾ. ಕುಮಾರ ಹೊಸಳ್ಳಿ ವಕೀಲರ ಆರೋಗ್ಯ ತಪಾಸಣೆ ನಡೆಸಿದರು.

ಸಂಘದ ಅಧ್ಯಕ್ಷ ಎಸ್​.ಎಚ್​. ಜತ್ತಿ, ಕಾರ್ಯದಶಿರ್ -ಪಿ.ಎಸ್​. ಹೆಬ್ಬಾಳ, ಸಹಕಾರ್ಯದಶಿರ್- ನಾರಾಯಣ ಕಾಳೆ, ಬಿ.ಎಸ್​. ಅಂಬ್ಲೇರ, ಕವಿತಾ ಕಿತ್ತೂರ, ಆರ್​.ಎಚ್​. ತಂಗೋಡರ, ಎಂ.ಎಲ್​. ಸೊನ್ನದ, ಸಿ.ಎಸ್​. ಹಿರೇಮಠ, ಎಂ.ಎಂ. ರಜಾಕನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net