ಕಬೀರ್ ಮೊಬೈಲ್ ಕ್ಲಿನಿಕ್‌ಗೆ ಚಾಲನೆ ನೀಡಿದ ವಿಧಾನಸಭೆ ಉಪಾಧ್ಯಕ್ಷ

18-RNR-04
Published on

ಹಾವೇರಿ: ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳ ಸಹಜ. ಉಚಿತ ವೈದ್ಯಕೀಯ ಸೇವೆ ನೀಡುವ ಕಬೀರ ಮೊಬೈಲ್ ಕ್ಲಿನಿಕ್‌ನಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ತಾಪಂ ಆವರಣದಲ್ಲಿ ಭಾನುವಾರ ಉಚಿತ ವೈದ್ಯಕೀಯ ಸೇವೆಯ ಕಬೀರ್ ಮೊಬೈಲ್ ಕ್ಲಿನಿಕ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ತಪಾಸಣೆಗೆ ಗ್ರಾಮೀಣ ಭಾಗದ ಜನರು ನಗರಗಳಿಗೆ ಬರಲು ಹಿಂದೇಟು ಹಾಕುವುತ್ತಿರುವುದು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಕಬೀರ ಮೊಬೈಲ್ ಕ್ಲಿನಿಕ್ ಗ್ರಾಮೀಣ ಭಾಗದಲ್ಲಿ ಸಂಚರಿಸಲಿದ್ದು, ಅವರ ಮನೆಗೆ ಬಾಗಿಲಲ್ಲೆ ಆರೋಗ್ಯ ಸೇವೆ ದೊರೆಯಲಿದೆ ಎಂದರು.
ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ರೇಣುಕಾ ಪುತ್ರನ, ಕಬೀರ ಫೌಂಡೇಶನ್ ಅಧ್ಯಕ್ಷ ಕಬೀರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭರತ ಹೆಗಡೆ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಎಂ.ಎಂ. ಮೈದೂರ, ವೆಂಕಟೇಶ ಬಿಜಾಪುರ, ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net