ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಮುಖ್ಯ; ವಾಸುದೇವ

2-RNR-08
Published on

ಹಾವೇರಿ: ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಅತೀ ಪ್ರಮುಖವಾಗಿದ್ದು, ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗವು ಒಂದು ಅದ್ಭುತ ಸಾಧನವಾಗಿದೆ. ಯೋಗಭ್ಯಾಸವನ್ನು ನಮ್ಮ ನಿತ್ಯದ ಚಟುವಟಿಕೆಯಲ್ಲಿ ಅಳವಡಿಸಿಕೊಂಡರೆ, ರೋಗ ರಹಿತ ಜೀವನವು ನಮ್ಮದಾಗುತ್ತದೆ ಎಂದು ಯೋಗ ಪಟು ವಾಸುದೇವ ಗುಪ್ತಾ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ಜೆಸಿಐ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯವೇ ಭಾಗ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗ ಕೇವಲ ಋಷಿಮುನಿಗಳಿಗೆ ಮಾತ್ರ ಸೀಮಿತವಲ್ಲ. ಅದು ಎಲ್ಲರ ಜೀವನ ವಿಧಾನವಾಗಿದೆ. ಸಾತ್ವಿಕ ಆಹಾರ, ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಗಳು ನಮ್ಮಲ್ಲಿ ಉತ್ತಮ ಗುಣಗಳನ್ನು ಪ್ರೇರೇಪಿಸುತ್ತವೆ. ಸದೃಡ ದೇಹವು ಸದೃಡ ಮನಸ್ಸನ್ನು ಹೊಂದುತ್ತದೆ. ಆರೋಗ್ಯವಂತ ಸಮಾಜವು ಆರೋಗ್ಯವಂತ ದೇಶದ ಲಕ್ಷಣವಾಗಿದೆ ಎಂದರು.

ಜೆಸಿಐನ ಅಧ್ಯಕ್ಷೆ ವನಿತಾ ಮಾಗನೂರ ಮಾತನಾಡಿ, ಯುವ ಜನರಿಗೆ ನಾಯಕತ್ವ ಅವಕಾಶ ಕೊಡುವುದರ ಜೊತೆಗೆ ಅವರಿಗೆ ಸಾಮಾಜಿಕ ಜವಾಬ್ದಾರಿ ಪ್ರದಶಿರ್ಸಿಲು ಜಿಸಿಐ ವೇದಿಕೆ ಕಲ್ಪಿಸುತ್ತದೆ. ಇಂಥಹ ವೇದಿಕೆಗಳನ್ನು ಯುವ ಜನರು ಬಳಸಿಕೊಳ್ಳಬೇಕೆಂದು ಹೇಳಿದರು.

ಪ್ರಮುಖರಾದ ಮೀನಾ ಗುಪ್ತಾ, ಶೋಭಾ ತಾಂಡೂರ, ವಿರಾಜ ಕೋಟಕ್​, ಸುಮನ್​ ಕಡಕೋಳ, ರೇಷ್ಮಾ ಮುಷ್ಠಿ, ಮೇಘಾ ಮತ್ತಿತರರು ಉಪಸ್ಥಿತರಿದ್ದರು. ವನಿತಾ ಮಲ್ಲನಗೌಡರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net