ಅಹಿಂಸಾ ಮಾರ್ಗದಿಂದ ಬದುಕುವ ಅವಶ್ಯವಿದೆ; ಸದಾಶಿವ ಸ್ವಾಮೀಜಿ

26-RNR-10
Published on

ಹಾವೇರಿ: ಇಡಿ ಜಗತ್ತಿನಲ್ಲಿ ಶ್ರೇಷ್ಠ ಧರ್ಮ ಜೈನ್​ ಧರ್ಮ. ಎಲ್ಲರೂ ಅಹಿಂಸಾ ಮಾರ್ಗದಿಂದ ಬದುಕುವುದು ಅವಶ್ಯಕತೆ ಇದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಭಗವಾನ್​ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಭಾನುವಾರ ಮುನಿ ಶ್ರೀ 108 ವಿದಿತಸಾಗರ ಮಹಾರಾಜರ ಪಾವನ ವರ್ಷಾಯೋಗ ಮಂಗಲ ಕಲಶ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ಜನ್ಮ ಶೇಷ್ಠ ಎಂದು ವೇದ, ಶಾಸ್ತ್ರ, ಪುರಾಣಗಳು ಹೇಳುತ್ತವೆ. 84 ಲಕ್ಷ ಜೀವ ರಾಶಿ ದಾಟಿ ಮನುಷ್ಯ ಭವ ಪ್ರಾಪ್ತವಾಗುತ್ತದೆ. ಸಂಸ್ಕಾರಯುತ ಜೀವನ ನಡೆಸಬೇಕು. ಭೂಮಿ ಮೇಲೆ ಸಕಲ ಜೀವರಾಶಿಗೂ ಬದುಕುವ ಹಕ್ಕಿದೆ. ವಿದಿತಸಾಗರ ಮುನಿಗಳ ಪಾವನ ವರ್ಷಾ ಯೋಗದಿಂದ ಧರ್ಮ ಪ್ರಭಾವನೆಯಾಗಿದೆ. ಇಂದು ಉದ್ಘಾಟನೆಗೊಂಡ ಯುವಕ ಧರ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಾತನಾಡಿ, ಹಾವೇರಿ ನಾಗರದಲ್ಲಿ ಪಾವನ ವರ್ಷಯೋಗ ಅತ್ಯಂತ ಯಶಸ್ವಿಯಾಗಿ ಜರುಗಿತು. ಮುಂದಿನ ದಿನಗಳಲ್ಲಿ ಇದೆ ರೀತಿ ಧರ್ಮದ ಕೆಲಸವನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಬೆಳಗ್ಗೆ ಜಿನಮಂದಿರದಲ್ಲಿ ವಿಶೇಷ ಜಲಾಭಿಷೇಕ, ಗಂಧಾಭಿಷೇಕ, ಪುಷ್ಪವೃಷ್ಟಿ, ಬೃಹತ್​ ಶಾಂತಿಧಾರೆ. ಪೂಜೆ ಹಾಗೂ ಮತ್ತು ಭಕ್ತಾಮರ ಆರಾಧನೆ ಕಾರ್ಯಕ್ರಮ ಜರುಗಿತು.

ಮಾಣಿಕಚಂದ ಲಾಡರ್​ ಅವರು ಮುನಿಗಳ ಕುರಿತು ಸ್ವತ: ಬರೆದ ಕವನ ವಾಚಿಸಿದರು. ಪೊಲೀಸರು, ಇಂಜಿನಿಯರ್​, ವಕೀಲರನ್ನು ಸನ್ಮಾನಿಸಲಾಯಿತು.

ಪ್ರತಿಮಾಧಾರಿಗಳಾದ ಮಹಾವೀರ ಬಯ್ಯಾಜಿ ಹಾಗೂ ಜಯಕುಮಾರ್​ ಬಯ್ಯಾಜಿ, ಭರತಾರಾಜ್​ ಹಾಜರಿ, ಸಂಜೀವ ಇಂಡಿ, ಎಸ್​.ಎ. ವಿಜರಾಕುಮಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net