ಹೋಳಿ ಹುಣ್ಣಿಮೆ ನಿಮಿತ್ತ ಮದ್ಯ ಮಾರಾಟ ನಿಷೇಧ

je721538035802367-abc
Published on

ಹಾವೇರಿ: ಜಿಲ್ಲೆಯಲ್ಲಿ ಹೋಳಿ ಹಬ್ಬದ ಆಚರಣೆಯ ಸಮಯದಲ್ಲಿ ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.

ಮಾ. 13ರ ಬೆಳಗ್ಗೆ 6ರಿಂದ ಮಾ. 14ರ ಬೆಳಗ್ಗೆ 6 ಗಂಟೆವರೆಗೆ ಕುಪ್ಪೇಲೂರ ಹಾಗೂ ಹುರಳಿಕೊಪ್ಪಿ ಗ್ರಾಮಗಳಲ್ಲಿ, ಮಾ. 14ರಿಂದ ಮಾ. 16ರ ವರೆಗೆ ಹೊಸರಿತ್ತಿ, ಹಾವನೂರ, ಯಲಗಚ್ಚ, ಹಿರೇಹಳ್ಳಿ, ತಡಸ, ಹಿರೇಬೆಂಡಿಗೇರಿ, ಕುಸನೂರ, ಕಲಕೇರಿ, ಹತ್ತಿಮತ್ತೂರು, ಯಲವಿಗಿ ಗ್ರಾಮ ಹಾಗೂ ಹಾವೇರಿ ಶಹರ, ಮಾ. 15ರಿಂದ 16ರ ವರೆಗೆ ಗುತ್ತಲ ಪಟ್ಟಣ, ದೇವಗಿರಿ, ಕರ್ಜಗಿ, ರಾಣೆಬೆನ್ನೂರ ಶಹರ, ಮೆಡ್ಲೇರಿ, ಅರೇಮಲ್ಲಾಪೂರ, ಹಿರೇಬಿದರಿ, ತುಮ್ಮಿನಕಟ್ಟಿ, ಕುಮಾರಪಟ್ಟಣಂ, ಕರೂರ, ಮಾಕನೂರ, ಮಾಸೂರ, ನೀಡನೇಗಿಲ, ರಟ್ಟಿಹಳ್ಳಿ ಪಟ್ಟಣ, ಭದ್ರಾಪುರ, ಹುಲಗೂರ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮಾ. 17ರಿಂದ 18ರವರೆಗೆ ಹಲಗೇರಿ, ತಡಸ, ಮುತ್ತಳ್ಳಿ ಹಾಗೂ ದುಂಡಸಿ ಗ್ರಾಮಗಳಲ್ಲಿ, ಮಾ. 18ರಿಂದ 19ರವರೆಗೆ ಮೊಟೇಬೆನ್ನೂರ, ಹಂಸಭಾವಿ, ಚಿಕ್ಕೇರೂರ, ಕೋಡ, ಬೆಟಕೇರೂರ, ತಿಳವಳ್ಳಿ, ಹೇರೂರ, ಸವಣೂರ ಪಟ್ಟಣ, ಬೊಮ್ಮನಹಳ್ಳಿ, ಬೆಳಗಾಲಪೇಟೆ ಹಾಗೂ ಚಿಕ್ಕಾಂಶಿಹೊಸೂರ ಗ್ರಾಮಗಳಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ.

ಮಾ. 19ರಿಂದ ಮಾ. 20ರವರೆಗೆ ಬ್ಯಾಡಗಿ ಪಟ್ಟಣ, ಬಂಕಾಪುರ ಶಹರ, ಮನವಳ್ಳಿ ಗ್ರಾಮ ವ್ಯಾಪ್ತಿಯ ಪಂಚವಟಿ ಹೋಟೇಲ್​, ಆಡೂರ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮಾ. 20ರಿಂದ ಮಾಾ. 21ರವರೆಗೆ ಹಿರೇಕೆರೂರ ಪಟ್ಟಣ, ತಾವರಗಿ, ಶಿಗ್ಗಾಂವಿ ಪಟ್ಟಣ, ಹನುಮರಹಳ್ಳಿ ಹಾಗೂ ಮಾ. 22ರಿಂದ 23ರವರೆಗೆ ಅಕ್ಕಿಆಲೂರು ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net